ದಿಲ್ಲಿ ಸಿವಿಲ್ ಡಿಫೆನ್ಸ್ ಸಿಬ್ಬಂದಿ ಅತ್ಯಾಚಾರ, ಕೊಲೆ ಪ್ರಕರಣ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಪಿಎಂಗೆ ಮನವಿ

Update: 2021-09-17 12:13 GMT

ಉಡುಪಿ, ಸೆ.17: ದಿಲ್ಲಿ ಸಿವಿಲ್ ಡಿಫೆನ್ಸ್ ಸಿಬ್ಬಂದಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಿ ಸಂತ್ರಸ್ತೆ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮತ್ತು ಆಯಾ ತಾಲೂಕು ಘಟಕಗಳ ವತಿಯಿಂದ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.

ದಿಲ್ಲಿ ಸಿವಿಲ್ ಡಿಫೆನ್ಸ್ ಸಿಬ್ಬಂದಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ನಿರ್ಭಯ ಸಾಮೂಹಿಕ ಅತ್ಯಾ ಚಾರ ಹಾಗೂ ಕೊಲೆ ಪ್ರಕರಣದ ಬಳಿಕ ಕೇಂದ್ರ ಸರಕಾರ ಅತ್ಯಾಚಾರ ದಂತಹ ಹೀನ ಅಪರಾಧಕ್ಕೆ ಕಡಿವಾಣ ಹಾಕುವುದಾಗಿ ಭರವಸೆಗಳನ್ನು ನೀಡಿ, ಕಾನೂನಿ ನಲ್ಲಿ ಕೆಲವು ಬದಲಾವಣೆ ತಂದಿತ್ತು. ಇದರಿಂದ ದೇಶಾದ್ಯಂತ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಸೃಷ್ಟಿಯಾಗಬಹುದು ಎಂಬ ಆಶಾಭಾವನೆ ವ್ಯಕ್ತವಾಗಿತ್ತು. ಇದೀಗ ಈ ಆಶಾಭಾವನೆ ಸಂಪೂರ್ಣ ನಿರಾಶೆ ಮಾತ್ರವಲ್ಲ ಹತಾಶೆಯಾಗಿ ಪರಿವರ್ತನೆಯಾಗುವಂತಹ ಬೆಳವಣಿಗೆಗಳು ನಡೆದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ದಿಲ್ಲಿ ಪೊಲೀಸರ ಪ್ರಕಾರವೇ ರಾಜಧಾನಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮೊದಲ 6 ತಿಂಗಳುಗಳಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಶೇ.63.3 ಹೆಚ್ಚಾಗಿವೆ. ಉತ್ತರ ಭಾರತದ ರಾಜ್ಯಗಳಲ್ಲಿ ಮಹಿಳೆ ಯರ ಮೇಲಿನ ಲೈಂಗಿಕ ದಾಳಿ ಪ್ರಕರಣಗಳು ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಲೇ ಇವೆ. 2019ರ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯುರೋ ವಾರ್ಷಿಕ ವರದಿಯ ಪ್ರಕಾರ ದೇಶಾದ್ಯಂತ ಆ ವರ್ಷ 32,033 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅಂದರೆ ದಿನಕ್ಕೆ 88 ಅತ್ಯಾಚಾರ ಪ್ರಕರಣಗಳು. ಮಕ್ಕಳ ಹಕ್ಕುಗಳ ಸಂಸ್ಥೆ ಪ್ರಕಾರ ದೇಶದಲ್ಲಿ ಪ್ರತಿ 15 ನಿಮಿಷಗಳಿಗೆ ಒಂದು ಮಗುವಿನ ಮೇಲೆ ಲೈಂಗಿಕ ದಾಳಿ ನಡೆಯುತ್ತದೆ ಮತ್ತು ಕಳೆದ 10 ವರ್ಷಗಳಲ್ಲಿ ಈ ಪ್ರಮಾಣ ಶೇ.500 ಹೆಚ್ಚಳವಾಗಿದೆ. ನಮ್ಮ ದೇಶದಲ್ಲಿ ಸುಮಾರು ಶೇ.28 ಮಾತ್ರ ಇದೆ ಎಂದು ಮನವಿಯಲ್ಲಿ ದೂರಲಾಗಿದೆ.

ಅತ್ಯಾಚಾರದಂತಹ ಹೀನ ಕೃತ್ಯಗಳು ನಡೆಯಲೇಬಾರದು. ಅಂತಹ ಕಾನೂನು ವ್ಯವಸ್ಥೆ ಹಾಗು ಸಮಾಜ ನಿರ್ಮಾಣ ಮಾಡುವ ಗುರುತರ ಹೊಣೆಗಾರಿಕೆ ಸರಕಾರಕ್ಕಿದೆ. ಇನ್ನು ಅತ್ಯಾಚಾರ, ಕೊಲೆ ನಡೆದರೆ ಆರೋಪಿಗಳು ಹಾಗು ಸಂತ್ರಸ್ತರು ಯಾವುದೇ ಹಿನ್ನೆಲೆಯವರಾಗಿದ್ದರೂ ಆ ಪ್ರಕರಣದ ಕ್ಷಿಪ್ರ, ಪಾರ ದರ್ಶಕ ವಿಚಾರಣೆ ನಡೆದು ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗು ವುದನ್ನು ಸರಕಾರ ಖಚಿತಪಡಿಸಬೇಕು. ಇದು ಸಾಧ್ಯವಾಗಬೇಕಾದರೆ ಸರಕಾರ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಒಕ್ಕೂಟ ಮನವಿಯಲ್ಲಿ ಆಗ್ರಹಿಸಿದೆ.

ಜಿಲ್ಲಾಧಿಕಾರಿ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಇಬ್ರಾಹಿಮ್ ಸಾಹೇಬ್ ಕೋಟ, ನಿಕಟಪೂರ್ವ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ, ಹಿರಿಯ ಉಪಾಧ್ಯಕ್ಷ ಖತೀಬ್ ರಶೀದ್, ಉಪಾಧ್ಯಕ್ಷ ಇದ್ರೀಸ್ ಹೂಡೆ, ಜಿಲ್ಲಾ ಸಮಿತಿ ಸದಸ್ಯ ಶೇಖ್ ಅಬ್ದುಲ್ಲತೀಫ್ ಮದನಿ ಉಪಸ್ಥಿತರಿದ್ದರು.

ಕಾಪು ತಾಲೂಕು

ಮುಸ್ಲಿಮ್ ಒಕ್ಕೂಟ ಕಾಪು ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾಪು ಘಟಕದ ಅಧ್ಯಕ್ಷ ಶಬೀಹ್ ಅಹಮದ್ ಕಾಝಿ, ಜಿಲ್ಲಾ ಉಪಾಧ್ಯಕ್ಷ ಅನ್ವರ್ ಅಲಿ ಕಾಪು, ಮಾಜಿ ಜಿಲ್ಲಾಧ್ಯಕ್ಷ ಎಂ.ಪಿ.ಮೊಯಿದಿನಬ್ಬ, ಕಾರ್ಯದರ್ಶಿ ರಿಯಾಝ್ ಅಹಮದ್ ಮುದರಂಗಡಿ, ಅಬ್ದುಲ್ ಹಮೀದ್ ಮೂಳೂರು, ನಸೀರ್ ಅಹಮದ್ ಎಕ್ಕಾವನ್, ಅಬ್ದುಲ್ ಹಮೀದ್ ಪಡುಬಿದ್ರಿ, ಉಸ್ಮಾನ್ ಐಡಿಯಾಲ್ ಕಾಪು, ಇಕ್ಬಾಲ್ ಕಟಪಾಡಿ, ಮುಸ್ತಾಕ್ ಇಬ್ರಾಹಿಮ್, ಅಬ್ದುಲ್ಲಾ ಕಾಪು, ಅಬ್ದುಲ್ ಅಝೀಝ್ ಹೆಜಮಾಡಿ, ಸುಲೇಮಾನ್ ದಾವೂದ್, ಮುಹಮ್ಮದ್ ಇಕ್ಬಾಲ್ ಮಜೂರು ಉಪಸ್ಥಿತರಿದ್ದರು.

ಬ್ರಹ್ಮಾವರ ತಾಲೂಕು

ಮುಸ್ಲಿಮ್ ಒಕ್ಕೂಟ ಬ್ರಹ್ಮಾವರ ಘಟಕದ ವತಿ ಯಿಂದ ಬ್ರಹ್ಮಾವರ ತಾಲ್ಲೂಕು ದಂಡಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಬ್ರಹ್ಮಾವರ ಘಟಕದ ಅಧ್ಯಕ್ಷ ಜಮಾಲುದ್ದೀನ್, ಉಪಾಧ್ಯಕ್ಷ ಆಸಿಫ್ ಬೈಕಾಡಿ, ಕಾರ್ಯದರ್ಶಿ ತಾಜುದ್ದಿನ್ ಇಬ್ರಾಹಿಂ, ಸದಸ್ಯರುಗಳಾದ ಅಲ್ತಾಫ್ ಅಹ್ಮದ್ ಮಟ್ಪಾಡಿ, ಹಾರೂನ್ ರಶೀದ್ ಸಾಸ್ತಾನ ಉಪಸ್ಥಿತರಿದ್ದರು.

ಉಡುಪಿ ತಾಲೂಕು

ಒಕ್ಕೂಟದ ಉಡುಪಿ ತಾಲೂಕು ಘಟಕದಿಂದ ಉಡುಪಿ ತಹಶೀಲ್ದಾರ್ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟ ಉಡುಪಿ ತಾಲೂಕು ಘಟಕದ ಅಧ್ಯಕ್ಷ ಟಿ.ಎಂ. ಝಫರುಲ್ಲಾ, ಜೊತೆ ಕಾರ್ಯದರ್ಶಿ ಇಕ್ಬಾಲ್ ಮನ್ನಾ, ಸದಸ್ಯರುಗಳಾದ ನಿಸಾರ್ ಅಹ್ಮದ್, ಸಮೀರ್ ಮೀರಾ ಉಪಸ್ಥಿತರಿದ್ದರು.

ಬೈಂದೂರು ತಾಲೂಕು

ಒಕ್ಕೂಟದ ಬೈಂದೂರು ತಾಲೂಕು ಘಟಕದಿಂದ ಬೈಂದೂರು ತಹಶೀಲ್ದಾರ್ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟ ಬೈಂದೂರು ಘಟಕದ ಅಧ್ಯಕ್ಷ ಹಸನ್ ಮಾವಡ್, ಉಪಾಧ್ಯಕ್ಷ ಎಚ್.ಎಸ್.ಸಿದ್ದಿಕ್ ಸಾಹೇಬ್ ಶಿರೂರು, ಕೋಶಾಧಿಕಾರಿ ಶೇಖ್ ಫಯಾಜ್ ಅಲಿ, ಕಾರ್ಯದರ್ಶಿ ತಬ್ರೇಜ್ ನಾಗೂರ್, ಜೊತೆ ಕಾರ್ಯದರ್ಶಿ ಅಬು ಅಹಮದ್ ಖೋಕಾ, ಸದಸ್ಯರುಗಳಾದ ಮನೆಗಾರ್ ಜಿಫ್ರಿ ಸಾಹೇಬ್ ಶಿರೂರು, ಸಯ್ಯದ್ ಅಜಮಲ್ ಶಿರೂರು, ಬುವಾಜಿ ಮೊಹಸಿನ್ ಶಿರೂರು, ಮುಗಡಿ ಫಹೀಮ್, ಖುರಶಿದ್ ಆಲಂ ಹಬೀಬುಲ್ಲ ಬೈಂದೂರು, ದಬಾಪು ಅಬ್ದುಲ್ ಕಾದಿರ್ ಬೈಂದೂರು, ಝಕರಿಯ ಉಪ್ಪುಂದ, ಸಿರಾಜ್ ಹಲಗೇರಿ, ಸಮಿ ಹಲಗೇರಿ ಉಪಸ್ಥಿತರಿದ್ದರು.

ಕಾರ್ಕಳ ತಾಲೂಕು

ಒಕ್ಕೂಟದ ಕಾರ್ಕಳ ತಾಲೂಕು ಘಟಕದಿಂದ ಕಾರ್ಕಳ ತಹಶೀಲ್ದಾರ್ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ದಲ್ಲಿ ಕಾರ್ಕಳ ಘಟಕದ ಅಧ್ಯಕ್ಷ ಮೊಹಮ್ಮದ್ ಶರೀಫ್, ಕಾರ್ಯದರ್ಶಿ ಅಬ್ದುಲ್ ರಶೀದ್, ಕೋಶಾಧಿಕಾರಿ ಸಯ್ಯದ್ ಅಬ್ಬಾಸ್, ಕಾರ್ಕಳ ಮುಸ್ಲಿಂ ಜಮಾತ್ ಅಧ್ಯಕ್ಷ ಅಶ್ಪಾಕ್ ಅಹ್ಮದ್, ಕರ್ನಾಟಕ ಮುಸ್ಲಿಂ ಜಮಾತ್ ಕಾರ್ಕಳ ತಾಲೂಕು ಅಧ್ಯಕ್ಷ ನಾಸೀರ್ ಶೇಖ್, ನಿವೃತ್ತ ಗ್ರಾಮಲೆಕ್ಕಿಗ ಸುಲೇಮಾನ್, ಸದಸ್ಯರಾದ ಹಸನ್ ನಿಟ್ಟೆ ಉಪಸ್ಥಿತರಿದ್ದರು.

ಕುಂದಾಪುರ ತಾಲೂಕು

ಒಕ್ಕೂಟದ ಕುಂದಾಪುರ ತಾಲೂಕು ಘಟಕದಿಂದ ಕುಂದಾಪುರ ತಹಶೀಲ್ದಾರ್ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಮುಹಮ್ಮದ್ ರಫೀಕ್ ಗಂಗೊಳ್ಳಿ, ಉಪಾಧ್ಯಕ್ಷ ಎಸ್.ದಸ್ತಗೀರ್ ಕಂಡ್ಲೂರು, ಜಿಲ್ಲಾ ಕೋಶಾಧಿಕಾರಿ ಶಾಬಾನ್ ಹಂಗಳೂರು, ತಾಲೂಕು ಕಾರ್ಯದರ್ಶಿ ವೌಲಾನ ಝಮೀರ್ ಅಹ್ಮದ್ ರಶಾದಿ, ತಾಲೂಕು ಕೋಶಾಧಿಕಾರಿ ರಿಯಾಝ್ ಕೋಡಿ, ಜಿಲ್ಲಾ ಸಮಿತಿ ಸದಸ್ಯರಾದ ಮುಜಾವರ್ ಅಬು ಮುಹಮ್ಮದ್, ತಾಲೂಕು ಸದಸ್ಯರುಗಳಾದ ಮುಹಮ್ಮದ್ ರಫೀಕ್ ವಂಡ್ಸೆ, ಹುಸೇನ್ ಹೈಕಾಡಿ, ಅಬ್ಬು ಶೇಖ್ ಹಂಗಳೂರು, ಅಬ್ದುಲ್ ಖಾದರ್ ಮೂಡಗೋಪಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News