ಹೂಡೆ: ಜಮಾಅತೆ ಇಸ್ಲಾಮೀ ಹಿಂದ್‌ನಿಂದ ಮನೆ ಹಸ್ತಾಂತರ

Update: 2021-09-17 13:21 GMT

ಉಡುಪಿ, ಸೆ.17: ಜಮಾಅತೆ ಇಸ್ಲಾಮೀ ಹಿಂದ್ ತೋನ್ಸೆ-ಹೂಡೆ ವತಿಯಿಂದ ಆರ್ಥಿಕವಾಗಿ ಅಶಕ್ತ ಕುಟುಂಬಗಳಿಗೆ ಸೂರು ಒದಗಿಸುವ ಯೋಜನೆ ಯಡಿ ಹೂಡೆಯ ದಾರುಸ್ಸಲಾಮ್ ಮದ್ರಸದ ಬಳಿಯ ಅಬ್ದುಲ್ಲಾ ಸಾಹೇಬ್ ಕುಟುಂಬಕ್ಕಾಗಿ ನಿರ್ಮಿಸಿ ಕೊಡಲಾದ ಮನೆಯ ಕೀಲಿಕೈಯನ್ನು ತೋನ್ಸೆ ಹೂಡೆ ಜಮಾಅತೆ ಇಸ್ಲಾಮಿ ಹಿಂದ್‌ನ ಹಿರಿಯ ಸದಸ್ಯ ವೌಲಾನ ಆದಮ್ ಸಾಹೇಬ್ ಇಂದು ಸಾಂಕೇತಿಕವಾಗಿ ಹಸ್ತಾಂತರಿಸಿದರು.

ಮುಖ್ಯ ಅಥಿತಿಯಾಗಿ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಉಡುಪಿ ಜಿಲ್ಲಾ ಸಂಚಾಲಕಿ ಕುಲ್ಸೂಮ್ ಅಬೂಬಕರ್ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮಿ ಹಿಂದ್ ತೋನ್ಸೆ-ಹೂಡೆಯ ಅಧ್ಯಕ್ಷ ಅಬ್ದುಲ್ ಕಾದರ್ ವಹಿಸಿದ್ದರು. ತೋನ್ಸೆ ಗ್ರಾಪಂ ನಿಕಟ ಪೂರ್ವ ಅಧ್ಯಕ್ಷೆ ಫೌಝಿಯ ಪರ್ವೀನ್, ಮಾಜಿ ಉಪಾಧ್ಯಕ್ಷ ಉಸ್ತಾದ್ ಸಾದಿಕ್, ಮನೆಯ ಕೀಲಿಗೈ ಸ್ವೀಕರಿಸಿದ ಅಬ್ದುಲ್ಲಾ ಸಾಹೇಬ್ ಮಾತನಾಡಿದರು.

ಎಸ್‌ಐಓ ಸ್ಥಾನೀಯ ಅಧ್ಯಕ್ಷ ವಸೀಮ್ ಅಬ್ದುಲ್ಲಾ, ಅಬುಲೈಸ್ ಮಸೀದಿಯ ಇಮಾಮ್ ಮಹಮ್ಮದ್ ತಾರೀಕ್, ತೋನ್ಸೆ ಗ್ರಾಪಂ ಸದಸ್ಯರಾದ ವಿಜಯ ಪಡುಕುದ್ರು, ಕುಸುಮ ಗುಜ್ಜರಬೆಟ್ಟು, ಜಮೀಲಾ ಸದೀದಾ, ಮುಮ್ತಾಝ್ ಬೇಗಂ, ಪಂಚಾಯತ್ ಕಾರ್ಯದರ್ಶಿ ದಿನಕರ್ ಬೇಂಗ್ರೆ ಉಪಸ್ಥಿತರಿದ್ದರು. ಮೌಲಾನಾ ಶಾಹಿದ್ ಫಲಾಹಿ ಕುರಾನ್ ಪಠಿಸಿದರು. ಗ್ರಾಪಂ ಸದಸ್ಯ ಡಾ.ಫಹೀಮ್ ಅಬ್ದುಲ್ಲಾ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News