ಕಾರ್ಕಳ : ಅರ್ಥ್ ಮೂವರ್ಸ್ ಒಕ್ಕೂಟ ರಚನೆ

Update: 2021-09-17 14:27 GMT

ಕಾರ್ಕಳ : ಜೆಸಿಬಿ, ಹಿಟಾಚಿ, ಟಿಪ್ಪರ್ ವಾಹನ ಮಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಒಂದೆ ವೇದಿಕೆಯಡಿ ಬಗೆಹರಿಸುವ ಉದ್ದೇಶದಿಂದ ಕಾರ್ಕಳ, ಮೂಡಬಿದಿರೆ ಬೆಳ್ತಂಗಡಿ ಮತ್ತು ಬಂಟ್ವಾಳ ವಲಯಗಳ ಅರ್ಥ್ ಮೂವರ್‌ಸ್‌ ಒಕ್ಕೂಟ ರಚಿಸಲಾಗಿದೆ ಎಂದು ಅಧ್ಯಕ್ಷ ವಿನಯ ಹೆಗ್ಡೆ ತಿಳಿಸಿದ್ದಾರೆ.

ಪ್ರಕಾಶ್ ಹೊಟೇಲ್ ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ಸಾಧಕ ಬಾಧಕಗಳನ್ನು ಪರಿಗಣಿಸಿ ಉದ್ಯಮದ ಉಳಿವಿಗಾಗಿ ಗ್ರಾಹಕರ ಹಿತ ಚಿಂತನೆಯನ್ನು ಗಮನದಲ್ಲಿರಿಸಿಕೊಂಡು ಬಾಡಿಗೆ ದರಗಳ ನವೀಕರಿಸುವುದು ನಮಗೆ ಅನಿವಾರ್ಯವಾಗಿದೆ. ಡೀಸೆಲ್ ಬೆಲೆ ಏರಿಕೆ ನಿರ್ವಹಣಾ ವೆಚ್ಚ, ಚಾಲಕರ ವೇತನದಲ್ಲಿ ಏರಿಕೆಯಾಗಿರುವ ಹಿನ್ನಲೆಯಲ್ಲಿ ಈ ನಿರ್ಧಾರ ಮಾಡದೆ ಅನ್ಯ ದಾರಿಯಿಲ್ಲ. ಈ ದರ ಮುಂದಿನ ದೀಪಾವಳಿ ತನಕ ಚಾಲ್ತಿಯಲ್ಗಿರುತ್ತದೆ ಎಂದರು.

ಜೆಸಿಬಿ ಹಿಟಾಚಿ ಮತ್ತು ಟಿಪ್ಪರ್ ಬಾಡಿಗೆಯನ್ನು ಹತ್ತು ವರ್ಷಗಳ ಸುದೀರ್ಘ ಅವಧಿ ಬಳಿಕ ಪರಿಷ್ಕರಣೆ ಮಾಡಲಾಗಿದೆ. ಪ್ರತಿ ತಾಸಿಗೆ ಹಿಟಾಚಿ 1300 ರೂ. ಜೆಸಿಬಿ 1200 ರೂ.ಸಣ್ಣ ಹಿಟಾಚಿ ರೂ. 1100, ದಿನಕ್ಕೆ ಟಿಪ್ಪರ್ ರೂ 7ಸಾವಿರ. ಹಿಟಾಚಿ ಸಾಗಟ ವೆಚ್ಚ 5 ಕಿ.ಮೀ ವ್ಯಾಪ್ತಿಯೊಳಗೆ 2ಸಾವಿರ ರೂ. ಏರಿಕೆ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

ಒಕ್ಕೂಟ ಪದಾಧಿಕಾರಿಗಳಾದ ಪ್ರಕಾಶ್, ಆಲ್ವಿನ್ ಮೆನೆಜಸ್, ಆದಿರಾಜ್ ಜೈನ್ ಭರತ್ ಕುಮಾರ್, ಅಶೋಕ ಎಚ್ ಎಂ, ಕರುಣಾಕರ ಭಂಡಾರಿ, ಉದಯಕುಮಾರ್. ಕೇಂದ್ರ ಸಮಿತಿ ಸದಸ್ಯರ ಸಹಿತ ಹಲವು ಮಂದಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News