ಮೋದಿ ಜನ್ಮದಿನಕ್ಕಾಗಿ ಉಚಿತ ಆಟೋ ಸೇವೆ

Update: 2021-09-17 14:34 GMT

ಕಾಪು : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 71 ನೇ ಹುಟ್ಟು ಹಬ್ಬದ ಅಂಗವಾಗಿ ಮೋದಿ ಅಭಿಮಾನಿ ಚಂದ್ರ ಮಲ್ಲಾರ್ ಇವರ ವತಿಯಿಂದ ಕಾಪು ವ್ಯಾಪ್ತಿಯಲ್ಲಿ  ಸುಮಾರು 5 ಕಿಲೋ ಮೀಟರ್ ವರೆಗೆ ಉಚಿತ ಆಟೋ ಸೇವೆ ಹಮ್ಮಿ ಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ  ಶ್ರೀಕಾಂತ್ ನಾಯಕ್ ಚಾಲನೆ ನೀಡಿದರು.

ಈ ಸಂದರ್ಭ ಚಂದ್ರ ಮಲ್ಲಾರ್ ಮಾತಾನಾಡಿ ಮೋದಿಯವರ ದೊಡ್ಡ ಅಭಿಮಾನಿಯಾಗಿದ್ದು  ಜನರ ಸೇವೆ ಮಾಡುತ್ತಿರುವ ಮೋದಿಯವರ ಕಾರ್ಯವೈಖರಿವನ್ನು  ಮೆಚ್ಚಿ ಅವರ ಹುಟ್ಟು ಹಬ್ಬದಂದು ಸಾರ್ವಜನಿಕರಿಗೆ ತನ್ನಿಂದ  ಅಲ್ಪ ಮಟ್ಟಿನ ಸೇವೆ ನೀಡುವ ಉದ್ದೇಶ ಹೊಂದಿದ್ದೇನೆ. ಈ ನಿಟ್ಟಿನಲ್ಲಿ  ಕಾಪು ಪೇಟೆಯಿಂದ 5 ಕಿಲೋ ಮೀಟರ್ ವರೆಗೆ ಇಂದು ಬೆಳಿಗ್ಗೆ  9 ಗಂಟೆಯಿಂದ ಸಂಜೆ 7  ಗಂಟೆವರೆಗೆ ಉಚಿತ ಸೇವೆ ನೀಡುತ್ತಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News