112 ಮಹತ್ವಾಕಾಂಕ್ಷಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸಲು ನೀತಿ ಆಯೋಗದೊಂದಿಗೆ ‘ಬೈಜು’ ಪಾಲುದಾರಿಕೆ

Update: 2021-09-17 15:47 GMT

ಹೊಸದಿಲ್ಲಿ, ಸೆ. 17  : ದೇಶದ 112 ಮಹತ್ವಾಕಾಂಕ್ಷೆಯ ಜಿಲ್ಲೆಗಳ ಮಕ್ಕಳಿಗೆ ತನ್ನ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮವನ್ನು ಉಚಿತವಾಗಿ ನೀಡಲು ನೀತಿ ಆಯೋಗದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ ಎಂದು ತಂತ್ರಜ್ಞಾನ ಆಧಾರಿತ ಕಲಿಕೆಯ ಪ್ರಮುಖ ಸಂಸ್ಥೆ ‘ಬೈಜು’ ಶುಕ್ರವಾರ ಹೇಳಿದೆ. ಜ್ಞಾನ, ಆವಿಷ್ಕಾರ ಹಾಗೂ ವ್ಯೆವಾಹತ್ಮಕ ಬೆಂಬಲ ವ್ಯವಸ್ಥೆ ರೂಪಿಸುವ ಸಮರ್ಪಣಾ ಮನೋಭಾವದ ಕಾರ್ಯಪಡೆಯನ್ನು ಸ್ಥಾಪಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ ಎಂದು ‘ಬೈಜು ’ ಹೇಳಿಕೆ ತಿಳಿಸಿದೆ. ‌

ದೇಶದಲ್ಲಿ ಆರೋಗ್ಯ ಹಾಗೂ ಪೋಷಕಾಂಶ, ಶಿಕ್ಷಣ, ಕೃಷಿ ಹಾಗೂ ನೀರಿನ ಸೌಲಭ್ಯ, ಮೂಲ ಸೌಕರ್ಯ, ಆರ್ಥಿಕ ಒಳಗೊಳ್ಳುವಿಕೆ, ಕೌಶಲ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಸವಾಲಾಗಿರುವ ಜಿಲ್ಲೆಗಳು ಮಹತ್ವಾಕಾಂಕ್ಷಿ ಜಿಲ್ಲೆಗಳು ಎಂದು ‘ಬೈಜು’ ಹೇಳಿದೆ. ನಿರಂತರತೆಯನ್ನು ಖಾತ್ರಿ ಪಡಿಸುವಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸಿದೆ ಹಾಗೂ ಬಹಳಷ್ಟು ತರಗತಿ ಕೋಣೆಗಳು ಆನ್ಲೈನ್ ಸ್ವರೂಪಕ್ಕೆ ಪರಿವರ್ತನೆ ಹೊಂದಿದೆ ಎಂದು ‘ಬೈಜು’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News