ಕಾಪು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ನಿರುದ್ಯೋಗ ದಿವಸ್ ಪ್ರತಿಭಟನೆ

Update: 2021-09-17 15:57 GMT

ಕಾಪು : ಪ್ರಧಾನಿ ನರೇಂದ್ರ ಮೋದಿ ತನ್ನ ಆಡಳಿತದಲ್ಲಿ ಉದ್ಯೋಗ ಸೃಷ್ಟಿಸುವುದಾಗಿ ಸುಳ್ಳು ಭರವಸೆ ನೀಡಿ ಇದೀಗ ಉದ್ಯೋಗದಲ್ಲಿದ್ದ  ಯುವಕರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. , ಸುಳ್ಳು ಭರವಸೆ, ಆಶ್ವಾಸನೆ ನೀಡಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಬಿಜೆಪಿಯದ್ದು ಪುಕ್ಕಟೆ ಪ್ರಚಾರವೇ ದೊಡ್ಡ ಸಾಧನೆಯಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಲೇವಡಿ ಮಾಡಿದರು. 

ರಾಷ್ಟ್ರೀಯ ನಿರುದ್ಯೋಗ ದಿನದ ಅಂಗವಾಗಿ ಕೇಂದ್ರ ಮತ್ತು ರಾಜ್ಯ ಸಕಾರದ ವಿರುದ್ಧ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಮತ್ತು ಕಾಪು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಕಾಪು ಪೇಟೆಯಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. 

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಸರ್ಕಾರದ ಸಂಸ್ಥೆಗಳನ್ನು ಖಾಸಗಿ ಕಂಪೆನಿಗಳಿಗೆ ಮಾರಾಟ ಮಾಡುವುದರಿಂದಾಗಿ ನಿರುದ್ಯೋಗ ಹೆಚ್ಚಾಗಿದೆ. ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ ನಡೆಯುತಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದನೆ ನೀಡುತಿಲ್ಲ. ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳ ತೆರವು ಕಾರ್ಯಾಚರಣೆ ನಡೆಸುತ್ತಿರುವ ಮೂಲಕ ಈ ಸರ್ಕಾರ ಜನ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಒಂದೆಡೆ ಬೆಲೆಯೇರಿಕೆಯಿಂದ ಜನ ತತ್ತರಿಸುತ್ತಿದ್ದರೆ ಮತ್ತೊಂದೆಡೆ ಉದ್ಯೋಗ ಕಳೆದುಕೊಂಡು ಜನ ಪರದಾಡುವಂತಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬವನ್ನು ನಿರುದ್ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕೆಪಿಸಿಸಿ ಸಂಯೋಜಕ ನವೀನ್‍ ಚಂದ್ರ ಜೆ. ಶೆಟ್ಟಿ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್, ಪಕ್ಷದ ಮುಖಂಡರಾದ ಶಿವಾಜಿ ಎಸ್. ಸುವರ್ಣ, ಅಬ್ದುಲ್ ಅಝೀಝ್ ಹೆಜಮಾಡಿ, ಮಹಮ್ಮದ್ ಸಾಧಿಕ್, ದೀಪಕ್ ಕುಮಾರ್ ಎರ್ಮಾಳು, ನವೀನ್ ಎನ್. ಶೆಟ್ಟಿ, ಶ್ರೀಕರ ಅಂಚನ್, ಅಮೀರುದ್ದೀನ್ ಕಾಪು, ಗಣೇಶ ಆಚಾರ್ಯ, ಐತಪ್ಪ ಕೋಟ್ಯಾನ್, ಶರ್ಪುದ್ದೀನ್ ಶೇಖ್, ಗೋಪಾಲ ಪೂಜಾರಿ ಪಲಿಮಾರು, ಮಾಧವ ಆರ್. ಪಾಲನ್, ಶಾಂತಲತಾ ಶೆಟ್ಟಿ, ಅಶ್ವಿನಿ, ಮೈಕಲ್ ಡಿ ಸೋಜ, ಗಣೇಶ್ ಕೋಟ್ಯಾನ್, ನಾಗಭೂಷಣ್ ಉಳಿಯಾರು, ಯಶವಂತ್ ಪಲಿಮಾರು, ಪ್ರಭಾಕರ ಆಚಾರ್ಯ, ಸೌರಭ್ ಬಲ್ಲಾಳ್, ಶಾಬು ಸಾಹೇಬ್, ಅಶೋಕ್ ರಾವ್, ಸುಶೀಲ್ ಬೋಳಾರ್, ಕೇಶವ ಹೆಜಮಾಡಿ, ಲವ ಕರ್ಕೇರ, ವಿಲ್ಮಾ, ಡಿಯಾನ್, ಶಬರೀಶ್, ಹಮೀದ್, ರಿಯಾಝ್, ಆಗ್ನೇಸ್ ಡೇಸಾ, ವಿನೋದ್ ಮಾರ್ಟಿಸ್, ದೀಪ್ತಿ, ಸುಧಾಕರ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News