ಉತ್ತರಪ್ರದೇಶದ ನಿರುದ್ಯೋಗ ಪ್ರಮಾಣ 2016ಕ್ಕಿಂತ ಈಗ ಕಡಿಮೆಯಾಗಿದೆ: ಆದಿತ್ಯನಾಥ್

Update: 2021-09-17 17:00 GMT

ಲಕ್ನೊ: ರಾಜ್ಯದಲ್ಲಿ 2016 ರಲ್ಲಿ ನಿರುದ್ಯೋಗ ದರವು ಶೇಕಡ 17 ಕ್ಕಿಂತ ಹೆಚ್ಚಿತ್ತು. ಅದು ಈಗ ನಾಲ್ಕರಿಂದ ಐದು ಪ್ರತಿಶತಕ್ಕೆ ಇಳಿದಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.

 ವಿಶ್ವಕರ್ಮ ಶ್ರಮ ಸಮ್ಮಾನ ಯೋಜನೆಯಡಿ ತರಬೇತಿ ಪಡೆದ ಫಲಾನುಭವಿಗಳಿಗೆ ಹಾಗೂ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಸಾಲಗಳನ್ನು ವಿತರಿಸಿದ ನಂತರ ಅವರು ಮಾತನಾಡಿದರು.

"ಕಳೆದ ಒಂದೂವರೆ ವರ್ಷಗಳಿಂದ ಇಡೀ ಪ್ರಪಂಚವು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ತತ್ತರಿಸಿದೆ. ಲಾಕ್‌ಡೌನ್ ವಿಧಿಸಬೇಕಾಗಿತ್ತು ಹಾಗೂ  ಲಾಕ್‌ಡೌನ್ ಸಮಯದಲ್ಲಿ 40 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ರಾಜ್ಯಕ್ಕೆ ಮರಳಿದರು. ಈ ಅವಧಿಯಲ್ಲಿ ಸಾಂಪ್ರದಾಯಿಕ ಕುಶಲಕರ್ಮಿಗಳು ಹಾಗೂ  ಉದ್ಯಮಿಗಳು ಒಂದು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು. ಇದು ಅವರನ್ನು ಸ್ವಾವಲಂಬಿಗಳನ್ನಾಗಿಸುವ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಸ್ವಾವಲಂಬಿ ಭಾರತವನ್ನು ಮಾಡುವ ಪರಿಕಲ್ಪನೆಗೆ ಪ್ರಚೋದನೆ ನೀಡಿತು’’ ಎಂದು ಆದಿತ್ಯನಾಥ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News