ಕಾಸರಗೋಡು : ಜ್ವರದಿಂದ ಮೃತಪಟ್ಟ ಬಾಲಕಿಯ ನಿಫಾ ವರದಿ ನೆಗೆಟಿವ್

Update: 2021-09-17 17:04 GMT

ಕಾಸರಗೋಡು :  ಜ್ವದಿಂದ ಮೃತಪಟ್ಟ ಬದಿಯಡ್ಕ ಪಿಲಾಂ ಕಟ್ಟೆಯ ಐದರ ಹರೆಯದ ಬಾಲಕಿಯ ನಿಫಾ ತಪಾಸಣಾ ವರದಿ ನೆಗೆಟಿವ್ ಆಗಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ಪುಣೆ ಪ್ರಯೋಗಾಲಯದಿಂದ ತಪಾಸಣಾ  ವರದಿ ಲಭಿಸಿದೆ.

ಕೊರೋನ  ತಪಾಸಣಾ  ವರದಿ ನೆಗಟಿವ್ ಆಗಿತ್ತು. ಬಾಲಕಿಯಲ್ಲಿ ನಿಫಾ ಸೋಂಕಿನ ಲಕ್ಷಣ ಕಂಡು ಬಂದ  ಹಿನ್ನಲೆಯಲ್ಲಿ ಸಂಶಯ ನಿವಾರಣೆಗೆ  ಗಂಟಲಿನ ದ್ರವದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿತ್ತು.

ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ನಜಾ ಫಾತಿಮಾ ಎಂಬ  ಬಾಲಕಿ ಕಣ್ಣೂರಿನ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಮೃತಪಟ್ಟಿದ್ದಳು . ಬಾಲಕಿಯ ಮನೆ ಹೊಂದಿರುವ ಚೆಂಗಳ ಗ್ರಾಮ ಪಂಚಾಯತ್ ವ್ಯಾಪ್ತಿ  ಹಾಗೂ ಪರಿಸರದ ಗ್ರಾಮ ಪಂಚಾಯತ್  ಗಳಲ್ಲಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರು.

ಚೆಂಗಳ ಅಲ್ಲದೆ ಬದಿಯಡ್ಕ, ಕುಂಬ್ಡಾಜೆ  ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿಗಾ ಇರಿಸಲಾಗಿತ್ತು. ಜನ ಸೇರುವ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆ ನಿಷೇಧ ಹೇರಿತ್ತು. ಕೋವಿಡ್  ವ್ಯಾಕ್ಸಿನ್ ಸ್ಥಗಿತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News