ಪಾಕಿಸ್ತಾನ: 5 ಉಗ್ರರಿಗೆ ಜೈಲುಶಿಕ್ಷೆ

Update: 2021-09-17 17:15 GMT

ಇಸ್ಲಮಾಬಾದ್, ಸೆ.17: ನಿಷೇಧಿತ ತೆಹ್ರೀಕಿ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಸಂಘಟನೆಯ ಸದಸ್ಯರ ಸಹಿತ 5 ಉಗ್ರರಿಗೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭಯೋತ್ಪಾದನೆ ವಿರೋಧಿ ನ್ಯಾಯಾಲಯವು ಶುಕ್ರವಾರ ತಲಾ 5 ವರ್ಷಗಳ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

 ಮುಹಮ್ಮದ್ ಅಸ್ಲಾಮ್, ಬಷರತ್ ಖಾನ್, ಮುಹಮ್ಮದ್ ಆಲಿ, ನಿಯಾಝ್ ಅಬ್ಬಾಸ್ ಮತ್ತು ಆದಿಲ್ ಅಬ್ಬಾಸ್ ಜೈಲುಶಿಕ್ಷೆಗೆ ಒಳಗಾದವರು. ಇವರನ್ನು ಪಂಜಾಬ್ನ ಸರ್ಗೋದ ಮತ್ತು ಖುಷಾಬ್ ಜಿಲ್ಲೆಗಳಲ್ಲಿ ಸರಕಾರಿ ಕಟ್ಟಡ ಹಾಗೂ ಕಾನೂನು ಜಾರಿ ಏಜೆನ್ಸಿಗಳ ಮೇಲೆ ದಾಳಿ ನಡೆಸಲು ಸಂಚು ನಡೆಸುತ್ತಿದ್ದಾಗ ಬಂಧಿಸಿದ್ದು ಕೈಬಾಂಬ್ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿತ್ತು. ಇವರ ಮೇಲಿನ ಆರೋಪ ಸಾಬೀತಾಗಿರುವುದರಿಂದ 5 ಮಂದಿಗೆ ತಲಾ 5 ವರ್ಷಗಳ ಜೈಲುಶಿಕ್ಷೆ ಮತ್ತು ತಲಾ 5 ಲಕ್ಷ ರೂ.(ಪಾಕ್ ಕರೆನ್ಸಿ) ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಯೋತ್ಪಾದನೆ ನಿಗ್ರಹ ಇಲಾಖೆ(ಸಿಟಿಡಿ)ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News