×
Ad

ಕ್ಯೂಬ: 2 ವರ್ಷದ ಮಕ್ಕಳಿಗೆ ಕೊರೋನ ಲಸಿಕೀಕರಣ ಆರಂಭ

Update: 2021-09-17 22:49 IST

ಹವಾನ, ಸೆ.17: ಕ್ಯೂಬದಲ್ಲಿ ಗುರುವಾರ 2ರಿಂದ 10 ವರ್ಷದವರೆಗಿನ ಮಕ್ಕಳಿಗೆ ಕೊರೋನ ವಿರುದ್ಧದ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಎಳೆಯ ಮಕ್ಕಳಿಗೆ ಲಸಿಕೀಕರಣ ಪ್ರಕ್ರಿಯೆ ಆರಂಭಿಸಿದ ಮೊತ್ತಮೊದಲ ದೇಶವಾಗಿ ಗುರುತಿಸಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕ್ಯೂಬದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೊರೋನ ವಿರುದ್ಧದ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ನಡೆಸಿದ್ದು ಉತ್ತಮ ಫಲಿತಾಂಶ ಬಂದಿದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದು ಪರಿಣಾಮಕಾರಿ ಎಂದು ಸಾಬೀತಾದ ಬಳಿಕ ಎಳೆಯ ಮಕ್ಕಳಿಗೆ ಲಸಿಕೆ ಹಾಕಲು ನಿರ್ಧರಿಸಲಾಗಿದೆ. ಮಕ್ಕಳ ಸುರಕ್ಷತೆಗೆ ನಮ್ಮ ಪ್ರಥಮ ಆದ್ಯತೆಯಿದೆ ಎಂದು ವೆದಾದೋಸ್ ಯುನಿವರ್ಸಿಟಿ ಪಾಲಿಕ್ಲಿನಿಕ್ನ ನಿರ್ದೇಶಕ ಅರೋಲಿಸ್ ಒಟಾನೋ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News