ಅಲ್ ಖೈದಾಗೆ ನೆರವು ನೀಡಿದ ಆರೋಪ: ಟರ್ಕಿಯ 5 ವ್ಯಕ್ತಿಗಳಿಗೆ ಅಮೆರಿಕ ನಿರ್ಬಂಧ

Update: 2021-09-17 17:29 GMT

ವಾಷಿಂಗ್ಟನ್, ಸೆ.17: ಅಲ್ ಖೈದಾ ಭಯೋತ್ಪಾದಕ ಸಂಘಟನೆಗೆ ಆರ್ಥಿಕ ನೆರವು ಹಾಗೂ ಪ್ರಯಾಣ ದಾಖಲೆ ಪಡೆಯಲು ನೆರವಾದ ಆರೋಪದಲ್ಲಿ ಟರ್ಕಿಯ ಐವರು ವ್ಯಕ್ತಿಗಳ ವಿರುದ್ಧ ಅಮೆರಿಕ ನಿರ್ಬಂಧ ಜಾರಿಗೊಳಿಸಿದೆ ಎಂದು ಮೂಲಗಳು ಹೇಳಿವೆ.

ನಿರ್ಬಂಧಕ್ಕೆ ಒಳಗಾದ ವ್ಯಕ್ತಿಗಳು ಅಮೆರಿಕದ ವ್ಯಾಪ್ತಿಯಲ್ಲಿ ಹೊಂದಿರುವ ಆಸ್ತಿಗಳ ಮುಟ್ಟುಗೋಲು ಹಾಕಿಕೊಳ್ಳಲು ಅಮೆರಿಕದ ಹಣಕಾಸು ಇಲಾಖೆಗೆ ಅಧಿಕಾರವಿದೆ. ಅಲ್ಲದೆ ಈ ವ್ಯಕ್ತಿಗಳು ಜಾಗತಿಕ ಆರ್ಥಿಕ ವ್ಯವಹಾರದಲ್ಲಿ ಪಾಲ್ಗೊಳ್ಳದಂತೆ ನಿಷೇಧಿಸಬಹುದಾಗಿದೆ. ಅಲ್ಖೈದಾ ಸೇರಿದಂತೆ ಭಯೋತ್ಪಾದಕ ಸಂಘಟನೆಗಳಿಗೆ ನೆರವಾಗುತ್ತಿರುವ ವ್ಯಕ್ತಿಗಳು, ಸಂಸ್ಥೆಗಳ ಜಾಲವನ್ನು ಬಯಲಿಗೆಳೆಯಲು ಟರ್ಕಿ ಹಾಗೂ ಇತರ ಮಿತ್ರದೇಶಗಳೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಹಣಕಾಸು ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ವಿಭಾಗದ ನಿರ್ದೇಶಕಿ ಆ್ಯಂಡ್ರಿಯಾ ಗಾಸ್ಕಿ ಹೇಳಿದ್ದಾರೆ.

 ಈಜಿಪ್ಟ್ ಮೂಲದ ನ್ಯಾಯವಾದಿ, ಟರ್ಕಿಯಲ್ಲಿ ಅಲ್ ಖೈದಾ ಚಟುವಟಿಕೆಗಳಿಗೆ ಪ್ರಧಾನ ನೆರವುಗಾರ ಮಜೀದಿ ಸಲೀಮ್, ಈಜಿಪ್ಟ್ ಮೂಲದ ಮುಹಮ್ಮದ್ ನಸರ್, ಟರ್ಕಿ ಪ್ರಜೆಗಳಾದ ನುರೆಟ್ಟಿನ್ ಮುಸ್ಲಿಹಾನ್, ಸೆಬ್ರೈಲ್ ಗ್ಯುಝೆಲ್ ಮತ್ತು ಸೋನರ್ ಗುರ್ಲೆಯನ್ ನಿಬರ್ಂಧಕ್ಕೆ ಒಳಗಾದವರು ಎಂದು ಅಮೆರಿಕ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News