ರಶ್ಯ: ನವಾಲ್ನಿ ಆ್ಯಪ್ ತೆಗೆದು ಹಾಕಿದ ಗೂಗಲ್

Update: 2021-09-17 17:34 GMT

ಮಾಸ್ಕೋ, ಸೆ.17: ರಶ್ಯದಲ್ಲಿ ಸಂಸದೀಯ ಚುನಾವಣೆಗಾಗಿ 3 ದಿನಗಳ ಮತದಾನ ಶುಕ್ರವಾರ ಆರಂಭವಾಗುತ್ತಿದ್ದಂತೆಯೇ, ಬಂಧನದಲ್ಲಿರುವ ವಿಪಕ್ಷ ಮುಖಂಡ ಅಲೆಕ್ಸಿ ನವಾಲ್ನಿಯ ಮಿತ್ರರು ಚುನಾವಣೆ ಪ್ರಕ್ರಿಯೆ ಸಂಬಂಧ ರೂಪಿಸಿದ್ದ ಆ್ಯಪ್ ಅನ್ನು ಆ್ಯಪಲ್ ಮತ್ತು ಗೂಗಲ್ ಸ್ಟೋರ್ಸ್ನಿಂದ ತೆಗೆದು ಹಾಕಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪುಟಿನ್ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸುವ ಉದ್ದೇಶದಿಂದ ಎದುರಾಳಿ ಅಭ್ಯರ್ಥಿಗಳ ಬಗ್ಗೆ ಪ್ರಚಾರ ಮಾಡುವ ‘ಸ್ಮಾರ್ಟ್ ವೋಟಿಂಗ್’ ಆ್ಯಪ್ ಶುಕ್ರವಾರ ಆ್ಯಪಲ್ ಮತ್ತು ಗೂಗಲ್ ಸ್ಟೋರ್ಸ್ನಿಂದ ಮಾಯವಾಗಿದೆ. ಈ ಆ್ಯಪ್ ಅನ್ನು ತೆಗೆದುಹಾಕುವಂತೆ ಕಳೆದ ವಾರ ಸೂಚಿಸಿದ್ದ ರಶ್ಯ ಅಧಿಕಾರಿಗಳು, ಇದಕ್ಕೆ ತಪ್ಪಿದರೆ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿದ ಆರೋಪ ದಾಖಲಿಸುವ ಜತೆಗೆ ಭಾರೀ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News