ಬಾಹ್ಯಾಕಾಶದಲ್ಲಿ ಚಿತ್ರ ನಿರ್ಮಿಸಲು ರಶ್ಯಾ ಸಿದ್ಧತೆ

Update: 2021-09-17 17:36 GMT

ಮಾಸ್ಕೋ, ಸೆ.17: ರಶ್ಯಾದ ಇಬ್ಬರು ಅಂತರಿಕ್ಷ ಯಾನಿಗಳು ಹಾಗೂ ಸಿನೆಮಾ ಕ್ಷೇತ್ರದ ಇಬ್ಬರು ಸೇರಿಕೊಂಡು ಮುಂದಿನ ತಿಂಗಳು ಬಾಹ್ಯಾಕಾಶದಲ್ಲಿ ಸಿನೆಮ ಚಿತ್ರೀಕರಣ ನಡೆಸಲು ಸಿದ್ಧತೆ ನಡೆಸಿದ್ದು, ಬಾಹ್ಯಾಕಾಶದಲ್ಲಿ ಚಿತ್ರೀಕರಣ ನಡೆಸಿದ ಪ್ರಪ್ರಥಮ ಸಿನೆಮ ಇದಾಗಲಿದೆ ಎಂದು ನಟ, ನಿರ್ದೇಶಕ ಕ್ಲಿಮ್ ಶಿಪೆಂಕೊ ಗುರುವಾರ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ತಾವು 4 ಮಂದಿ ಸೋಯುಜ್ ಎಂಎಸ್-19 ಬಾಹ್ಯಾಕಾಶ ನೌಕೆಯಲ್ಲಿ ಅಕ್ಟೋಬರ್ 5ರಂದು ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದು ಅಲ್ಲಿ ಸಿನೆಮದ ಚಿತ್ರೀಕರಣ ನಡೆಯಲಿದೆ. ಓರ್ವ ಸಾಮಾನ್ಯ ವ್ಯಕ್ತಿಯ ಕುರಿತ ಸಿನೆಮ ಇದಾಗಲಿದೆ. ಬಾಹ್ಯಾಕಾಶ ಯಾನದ ಬಗ್ಗೆ ಕನಸಿನಲ್ಲೂ ಯೋಚಿಸಿರದ ಓರ್ವ ವೈದ್ಯ, ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಅಲ್ಲಿರುವ ಅಂತರಿಕ್ಷ ಯಾನಿಯ ಜೀವ ಉಳಿಸುವ ಕಥೆಯ ಸಿನೆಮ ಇದಾಗಿದೆ ಎಂದವರು ಹೇಳಿದ್ದಾರೆ.

ವೃತ್ತಿನಿರತ ಗಗನ ಯಾನಿಗಳೂ ಸಿನೆಮದಲ್ಲಿ ಇರಲಿದ್ದಾರೆ. ತಾನು ಈ ಸಿನಿಮಾದಲ್ಲಿಲ್ಲ. ಆದರೂ, ಬಾಹ್ಯಾಕಾಶದಂತಹ ಅಸಾಮಾನ್ಯ ಪ್ರದೇಶದಲ್ಲಿ ಸಿನೆಮವನ್ನು ಯಾವ ರೀತಿ ನಿರ್ಮಿಸುತ್ತಾರೆ ಎಂಬ ಕುತೂಹಲವಿದೆ ಎಂದು ಕಮಾಂಡರ್ ಆ್ಯಂಟನ್ ಶಕಲೆರೋವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News