ಮಂಗಳೂರು: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ 14 ಬಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಹಣಕಾಸು ನೆರವು

Update: 2021-09-17 18:15 GMT

ಮಂಗಳೂರು, ಸೆ. 17: ಮಂಗಳೂರಿನ ಮಲಬಾರ್ ಗೋಲ್ಡ್ ಹಾಗೂ ಡೈಮಂಡ್ಸ್ ತನ್ನ ಸಿಎಸ್‌ಆರ್ ಉಪಕ್ರಮದ ಭಾಗವಾಗಿ ನಗರದಲ್ಲಿ ಗೃಹ ದತ್ತಿ ಚೆಕ್ (ಹೌಸಿಂಗ್ ಚಾರಿಟಿ ಚೆಕ್)ಗಳನ್ನು ವಿತರಣೆ ಮಾಡಿತು.

ಈ ಸಂದರ್ಭ 14 ಕುಟುಂಬಗಳು ಮನೆ ನಿರ್ಮಾಣಕ್ಕೆ ಹಣಕಾಸು ನೆರವು ಪಡೆದುಕೊಂಡರು.

ಶಾಲಿಮಾರ್ ಆಡಳಿತ ನಿರ್ದೇಶಕ ಅಬ್ದುಲ್ ರಹೀಮ್, ಗ್ರೂಪ್-4ನ ಆಡಳಿತ ನಿದೇಶಕ ಅಹ್ಮದ್ ಬಶೀರ್, ಶ್ರೀ ಗೋಕರ್ಣನಾಥೇಶ್ವರ ದೇವಾಲಯದ ನೋಟರಿ, ಕೋಶಾಧಿಕಾರಿ, ಗುರು ಬೆಳದಿಂಗಳಿನ ಅಧ್ಯಕ್ಷ ಪದ್ಮರಾಜ ಆರ್., ಫಳ್ನೀರ್‌ನ ಕಾರ್ಪೋರೇಟರ್ ಜೆಸಿಂತಾ ವಿಜಯ್ ಆಲ್ಫ್ರೆಡ್, ಟೀಮ್ ಬಿ-ಹ್ಯೂಮನ್ ನ ಸ್ಥಾಪಕ ಆಸಿಫ್ ಡೀಲ್ಸ್, ಮಂಗಳೂರಿನ ಸ್ಟೋರ್ ಮುಖ್ಯಸ್ಥ ಶರತ್ ಹಾಗೂ ನಿರ್ವಹಣಾ ತಂಡದ ಇತರ ಸದಸ್ಯರೊಂದಿಗೆ ಕರುಣಾಕರನ್ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಕುರಿತು ಮಾತನಾಡಿದ ಮಲಬಾರ್ ಕಂಪೆನಿಗಳ ಸಮೂಹದ ಅಧ್ಯಕ್ಷ ಎಂ.ಪಿ. ಅಹ್ಮದ್, ಸಿಎಸ್‌ಆರ್‌ನ ಒಂದು ಭಾಗವಾಗಿ ನಿವಾಸ ರಹಿತರಿಗೆ ಮನೆ ನಿರ್ಮಾಣ, ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣ, ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನೆರವು ನೀಡಲು ಸಮೂಹ ಹೆಚ್ಚು ಒತ್ತು ನೀಡುತ್ತಿದೆ ಎಂದು ಹೇಳಿದ್ದಾರೆ.

ನಿವಾಸ ರಹಿತರಿಗೆ ಮನೆ ನಿರ್ಮಾಣಕ್ಕೆ ಭಾಗಶಃ ಹಣಕಾಸು ನೆರವು ನೀಡಲು ಮಲಬಾರ್ ಹೌಸಿಂಗ್ ಚಾರಿಟೇಬಲ್ ಟ್ರಸ್ಟ್ ಅನ್ನು 2004ರಲ್ಲಿ ಸ್ಥಾಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News