ಮಂಗಳೂರು: ಸೆ. 20ರಂದು ಪ್ರೆಸಿಡೆನ್ಸಿ ಸಿಬಿಎಸ್ಇ, ಪಿಯು ಕಾಲೇಜು ವಸತಿ ಕಾರ್ಯಕ್ರಮ ಉದ್ಘಾಟನೆ

Update: 2021-09-18 09:33 GMT

ಮಂಗಳೂರು, ಸೆ.18: ಪ್ರೆಸಿಡೆನ್ಸಿ ಸಿಬಿಎಸ್ಇ ಸ್ಕೂಲ್ ಮತ್ತು ಪಿಯು ಕಾಲೇಜಿನ (ಕೆಳರೈ, ಬೊಂಡಂತಿಲ, ಮಂಗಳೂರು ತಾಲೂಕು) ವಸತಿ ಕಾರ್ಯಕ್ರಮದ ಉದ್ಘಾಟನೆಯು ಸೆ.20ರಂದು ಬೆಳಗ್ಗೆ 9 ಗಂಟೆಗೆ ಪ್ರೆಸಿಡೆನ್ಸಿ ಕ್ಯಾಂಪಸ್ ಮಂಗಳೂರು ವಠಾರದಲ್ಲಿ ನಡೆಯಲಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಉಪಕಲಪತಿ  ಪ್ರೊ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಪ್ರೆಸಿಡೆನ್ಸಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ನಿಸಾರ್ ಅಹ್ಮದ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಗೌರವ ಅತಿಥಿಗಳಾಗಿ  ಕೌಸರ್ ನಿಸಾರ್ (ಅಧ್ಯಕ್ಷೆ ಪಿಜಿಐ ) ನಫೀಸಾ ಅಹ್ಮದ್ (ನಿರ್ದೇಶಕರು, ಪಿಜಿಐ) ಸುಹೈಲ್ ಅಹ್ಮದ್ (ಉಪಾಧ್ಯಕ್ಷರು ಪಿಜಿಐ) ಸಲ್ಮಾನ್ ಅಹ್ಮದ್ (ಉಪಾಧ್ಯಕ್ಷರು ಪಿಜಿಐ ) ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News