ಆರೋಪಿಯ ಬಂಧನ ನಡೆದ ಸ್ಥಳವನ್ನು ತಪ್ಪಾಗಿ ವರದಿ ಮಾಡಿದ್ದಕ್ಕೆ ಪತ್ರಕರ್ತನನ್ನು ಬಂಧಿಸಿದ ಹರ್ಯಾಣ ಪೊಲೀಸರು

Update: 2021-09-18 10:51 GMT

ಹೊಸದಿಲ್ಲಿ:  ಶಂಕಿತ ಉಗ್ರ ದಾಳಿ ನಡೆದ ನಿಖರ ಸ್ಥಳವನ್ನು ತಪ್ಪಾಗಿ ಗುರುತಿಸಿದ ತಪ್ಪಿಗೆ ಅಂಬಾಲದಲ್ಲಿ ದೈನಿಕ್ ಭಾಸ್ಕರ್ ವರದಿಗಾರ ಸುನೀಲ್ ಬ್ರಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.  ಪತ್ರಿಕೆಯ ಸುದ್ದಿ ಸಂಪಾದಕ ಸಂದೀಪ್ ಶರ್ಮ ಅವರ ಹೆಸರನ್ನೂ ಎಫ್‍ಐಆರ್‍ನಲ್ಲಿ ಉಲ್ಲೇಖಿಸಲಾಗಿದೆ. ಇಬ್ಬರ ವಿರುದ್ಧವೂ ಸೆಕ್ಷನ್ 153, 177, 505 (2) ಹಾಗೂ 504 ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಬುಧವಾರ ಪಂಜಾಬ್ ಪೊಲೀಸರು  ವ್ಯಕ್ತಿಯೊಬ್ಬನನ್ನು ಬಂಧಿಸಿದ ಪ್ರಕರಣದ ವರದಿಯನ್ನು ದೈನಿಕ್ ಭಾಸ್ಕರ್ ಗುರುವಾರ ಪ್ರಕಟಿಸಿತ್ತು. ಶಂಕಿತನನ್ನು ಮರ್ದೋನ್ ಸಾಹಿಬ್  ಎಂಬಲ್ಲಿಂದ ಬಂಧಿಸಲಾಗಿತ್ತಾದರೆ ಮರುದಿನದ ದೈನಿಕ್ ಭಾಸ್ಕರ್  ಶೀರ್ಷಿಕೆಯಲ್ಲಿ ಅಂಬಾಲಾದ ಕೆಂಟೋನ್ಮೆಂಟ್ ಪ್ರದೇಶದಲ್ಲಿ ಐಒಸಿ ಡಿಪೋ ಸಮೀಪ ಬಂಧಿಸಲಾಗಿತ್ತು ಎಂದು ಬರೆಯಲಾಗಿತ್ತು. ಗೂಗಲ್ ಮ್ಯಾಪ್ಸ್ ನಿಂದ ತಿಳಿದು ಬರುವಂತೆ ಎರಡೂ ಸ್ಥಳಗಳ ನಡುವಿನ ಅಂತರ 20 ಕಿಮೀಗೂ ಕಡಿಮೆ ಆಗಿದೆ. ಶುಕ್ರವಾರ ಪತ್ರಿಕೆ ತಿದ್ದುಪಡಿಯೊಂದನ್ನು ಪ್ರಕಟಿಸಿ ವ್ಯಕ್ತಿಯನ್ನು ಬಂಧಿಸಿದ ನಿಖರ ಸ್ಥಳದ ಕುರಿತು ಮಾಹಿತಿ ಒದಗಿಸಿತ್ತು.

ಈ ಪ್ರಕರಣ ಸಂಬಂಧ ಹರ್ಯಾಣಾದ ಹಲವು ವಿಪಕ್ಷ ನಾಯಕರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದು ಯಾರನ್ನೂ ಬಂಧಿಸಬೇಕಾದ ಅಗತ್ಯವಿರುವಂತಹ ತಪ್ಪು ಇದಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News