​ಸೆ.19: ಕಿನ್ಯದಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರ

Update: 2021-09-18 11:52 GMT

ಮಂಗಳೂರು, ಸೆ.18: ಕಿನ್ಯ ಗೋಲ್ಡನ್ ವೆಲ್ಫೇರ್ ಹೆಲ್ತ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಕಣ್ಣು ತಪಾಸನಾ ಶಿಬಿರವು ಸೆ.19ರಂದು ಬೆಳಗ್ಗೆ 10ರಿಂದ ಅಪರಾಹ್ನ 12:30ರವರೆಗೆ ಕಿನ್ಯ ಮದ್ರಸತುಲ್ ಖುತುಬಿಯಾ ಸಭಾಂಗಣದಲ್ಲಿ ಜರುಗಲಿದೆ.

ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ನೇತ್ರ ಶಸ್ತ್ರಚಿಕಿತ್ಸೆ ತಜ್ಞ ಡಾ. ಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ನಡೆಯುವ ಶಿಬಿರದಲ್ಲಿ ವೈದ್ಯೆ ಡಾ. ಅಫ್ರಾ ಇಸ್ಮಾಯೀಲ್, ಮೆಡೊಕ್ ವಿಷನ್ ಕೇರ್‌ನ ನಿರ್ದೇಶಕ ಝಿರಾರ್ ಅಬ್ದುಲ್ಲಾ ಕಾಸರಗೋಡು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News