ನಿರ್ಮಾಣ್ ಹೋಮ್ಸ್: ಮಥುರಾ ವಸತಿ ಸಮುಚ್ಚಯ ಉದ್ಘಾಟನೆ

Update: 2021-09-18 12:54 GMT

ಮಂಗಳೂರು : ನಗರದ ದೇರೇಬೈಲ್‍ನ ಮಥುರಾ ವಸತಿ ಸಮುಚ್ಚಯದ ಉದ್ಘಾಟನೆಯನ್ನು ಗುರುವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಜೆನರಲ್ ಮ್ಯಾನೇಜರ್  ರಾಜೇಶ್ ಗುಪ್ತ ನೆರವೇರಿಸಿದರು.

ಬಳಿಕ ಮಾತಾನಾಡಿದ ಅವರು ನಿರ್ಮಾಣ್ ಹೋಮ್ಸ್ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಗ್ರಾಹರಿಗೆ ಅತ್ಯುತ್ತಮ ಸೇವೆಯನ್ನೂ ಹಾಗೂ ಎಲ್ಲಾ ವರ್ಗದ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಮನೆಗಳನ್ನು ನೀಡುತ್ತಾ ಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ನಿರ್ಮಾಣ್ ಹೋಮ್ಸ್ ಉತ್ತಮವಾದ ಬೆಸುಗೆಯನ್ನು ಹೊಂದಿದ್ದು ಮಥುರಾ ವಸತಿ ಸಮುಚ್ಚಯದ ಶೇ 75ರಷ್ಟು ಮನೆಗಳಿಗೆ ಎಸ್‍ಬಿಐ ಗೃಹ ಸಾಲವನ್ನು ಒಗಿಸಿರುತ್ತದೆ. ಇದೀಗ ಮಥುರಾ ವಸತಿ ಸಮುಚ್ಚಯವು ಎಲ್ಲರ ಅಪೇಕ್ಷೆಗೂ ಮೀರಿ ಉತ್ತಮ ಸೌಕರ್ಯಗಳೊಂದಿಗೆ ಉದ್ಘಾಟಗೊಂಡಿದೆ ಎಂದು ನುಡಿದು ಶುಭ ಹಾರೈಸಿದರು.

ಮತ್ತೊಬ್ಬ ಅಥಿತಿ ಚಾರ್ಟೆಡ್ ಅಕೌಂಟೆಂಟ್ ಕೇಶವ ಬಳ್ಳುಕರಾಯ ಅವರು ಮಾತನಾಡಿ ಈ ಯೋಜನೆಯು ಸಾಮಾನ್ಯ ವರ್ಗದ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಲಭಿಸಿದ್ದು ಪೂರ್ಣವಾದ ಮೂಲ ಸೌಕರ್ಯಗಳನ್ನು ಹೊಂದಿದೆ ಹಾಗೂ ಕೋವಿಡ್ ರೋಗದ ಕಾಲಘಟ್ಟದ ಹೊರತಾಗಿಯೂ ನಿರ್ಮಾಣ್ ಹೋಮ್ಸ್ ಸಂಸ್ಥೆಯು ಮಥುರಾವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿರುವುದು ಹೆಮ್ಮೆಯ ವಿಷಯ ಎಂದು ನುಡಿದರು.

ದೇರೇಬೈಲ್‍ನ ಕಾರ್ಪೊರೇಟರ್ ರಂಜಿನಿ ಕೋಟ್ಯಾನ್‍ ಮಾತನಾಡಿ, ಮಥುರಾ ವಸತಿ ಸಮುಚ್ಚಯದ ವಿನ್ಯಾಸ ಅತ್ಯುತ್ತಮವಾಗಿ ಮೂಡಿ ಬಂದಿದ್ದು ಇದು ಮೂಲಭೂತ ಸೌಕರ್ಯಗಳಿಗೆ ಬಹಳ ಹತ್ತಿರದಲ್ಲಿದೆ. ಮುಂದಿನ ದಿನಗಳಲ್ಲಿ ನಿರ್ಮಾಣ್ ಹೋಮ್ಸ್ ಸಂಸ್ಥೆಯು ಜನ ಸಾಮಾನ್ಯರಿಗೆ ಇಂತಹ ಮತ್ತಷ್ಟು ವಸತಿ ಸಮುಚ್ಚಯವನ್ನು ನಿರ್ಮಿಸಲಿ ಇಂದು ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ಮೊದಲ 5 ಗ್ರಾಹಕರಿಗೆ ಫ್ಲಾಟ್‍ನ ಕೀಲಿಕೈಯನ್ನು ಹಸ್ತಾಂತರಿಸಲಾಯಿತು. ನಿರ್ಮಾಣ್ ಹೋಮ್ಸ್  ಪಾಲುದಾರ ಕೃಷ್ಣರಾಜ್ ಸಾಲ್ಯಾನ್ ಸ್ವಾಗತಿಸಿದರು. ಭೂ ಮಾಲಕ ಸೂರಜ್ ಕೋಟ್ಯಾನ್ ವಂದಿಸಿದರು. ಸಮಾರಂಭದಲ್ಲಿ ನಿರ್ಮಾಣ್ ಹೋಮ್ಸ್ ಪಾಲುದಾರರಾದ  ಗುರುದತ್ತ ಶೆಣೈ, ಮಂಗಲ್‍ ದೀಪ್, ಮಹೇಶ್ ಶೆಟ್ಟಿ ಮತ್ತಿತರು ಉಪಸ್ತಿತರಿದ್ದರು.

ಉರ್ವಾಸ್ಟೋರ್ ನಲ್ಲಿ ಶೀಘ್ರದಲ್ಲೇ ಮಂದಾರ ಎಕ್ಸೆಲೆನ್ಸಿ ವಸತಿ ಸಮುಚ್ಚಯ

ನಗರದ ಉರ್ವಾಸ್ಟೋರ್ ನಲ್ಲಿ ಮಂದಾರ ಎಕ್ಸೆಲೆನ್ಸಿ ಎಂಬ ವಸತಿ ಸಮುಚ್ಚಯವನ್ನು ಜನತೆಗೆ ಶೀಘ್ರದಲ್ಲೇ ಪರಿಚಯಿಸಲಿದ್ದಾರೆ. ಈ ವಸತಿ ಸಮುಚ್ಚಯದಲ್ಲಿ 682 - 764 ಚ. ಅಡಿಯ (1BHK), 1021-1258 ಚ.ಅಡಿಯ (2BHK) ಹಾಗೂ 1512-1777 ಚ.ಅಡಿಯ (3BHK) ಫ್ಲಾಟ್‍ಗಳು ನಿರ್ಮಾಣಗೊಳ್ಳಲಿದೆ.

ಈ ಅಪಾರ್ಟ್‍ಮೆಂಟ್‍ನ ವಿಷೇಶತೆಯೆಂದರೆ ಮಂಗಳೂರಿನಲ್ಲೇ ಪ್ರಪ್ರಥಮ ಬಾರಿಗೆ 3 ರೀತಿಯ ನೀರಿನ ಮೂಲವನ್ನು (ಬಾವಿ, ಕಾರ್ಪೊರೇಷನ್, ಬೋರ್‍ವೆಲ್) ಹಾಗೂ ಎಲೆಕ್ಟ್ರಿಕಲ್ ಕಾರ್ ಚಾರ್ಜಿಂಗ್ ಪಾಯಿಂಟ್ ಹೊಂದಲಿದೆ. ಇದರೊಂದಿಗೆ ಮಿನಿ ತಿಯೇಟರ್, ಹವಾನಿಯಂತ್ರಿತ ಜಿಮ್ನಾಷಿಯಮ್, ಒಳಾಂಗಣ ಆಟದ ತಾಣ, ಮಕ್ಕಳ ಆಟದ ತಾಣ, ಲೈಬ್ರೇರಿ, ಇಂಟರ್‍ಕಾಮ್ ಮತ್ತು ಆ್ಯಕ್ಸೆಸ್ ಕಂಟ್ರೋಲ್ಡ್ ಲಾಬಿ ಎಂಟ್ರೆನ್ಸ್. ಸೋಲಾರ್ ಲೈಟ್ಸ್, ಸಿಸಿ ಟಿವಿ ಕ್ಯಾಮರಾ, ಮೂರು ಸ್ವಯಂಚಾಲಿತ ಲಿಫ್ಟ್, ಕಾರ್ ಪಾರ್ಕಿಂಗ್ ಮತ್ತು ಜನರೇಟರ್ ವ್ಯವಸ್ಥೆಗಳಂತಹ ವೈಶಿಷ್ಟ್ಯಗಳನ್ನೊಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ. 

ಮಂದಾರ ಎಕ್ಸೆಲೆನ್ಸಿ ವಸತಿ ಸಮುಚ್ಚಯವನ್ನು ಮುಂದಿನ ಪೀಳಿಗೆಯ ಜನಾಂಗದ ಅಗತ್ಯಕ್ಕನುಗುಣವಾಗಿ ರಚಿಸಲಾಗಿದೆ. ಮಂಗಳೂರಿನಲ್ಲಿಯೇ ಪ್ರಪ್ರಥಮ ಬಾರಿಗೆ ಎಲೆಕ್ಟ್ರಿಕಲ್ ಕಾರ್ ಚಾರ್ಜಿಂಗ್ ಪಾಯಿಂಟ್ ಹಾಗೂ ನೀರಿನ ಕೊರತೆ ನೀಗಿಸಲು 3 ವಿಧದ ನೀರಿನ ಮೂಲವನ್ನು ಒದಗಿಸಲಾಗುವುದು. ಅಲ್ಲದೆ ಮನೋರಂಜನೆಗಾಗಿ ಮಿನಿ ತಿಯೇಟರ್, ಜಿಮ್ನಾಷಿಯಮ್ ಹಾಗೂ ಇನ್ನಿತರ ಹಲವು ಸೌಕರ್ಯಗಳನ್ನು ಇಲ್ಲಿ ನೀಡಲಾಗುವುದು ಹಾಗೂ ಇದೀಗ ರೇರಾದ ಅನುಮೋದನೆ ದೊರೆತ ಕೂಡಲೆ ಫ್ಲಾಟ್‍ನ ಬುಕ್ಕಿಂಗ್ ಆರಂಭಗೊಳ್ಳಲಿದೆ ಎಂದು ನಿರ್ಮಾಣ್ ಹೋಮ್ಸ್ ಸಂಸ್ಥೆಯ ಪಾಲುದಾರರಾದ ಕೃಷ್ಣರಾಜ್ ಸಾಲ್ಯಾನ್‍ರವರು ಪ್ರಕಟಣೆಗೆ ತಿಳಿಸಿದ್ದಾರೆ.
ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ನಗರದ ಕಾಪಿಕಾಡ್‍ನ ಸುಪ್ರಭಾತ ಬಿಲ್ಡಿಂಗ್‍ನ 4ನೇ ಮಹಡಿಯಲ್ಲಿರುವ ನಿರ್ಮಾಣ್ ಹೋಮ್ಸ್ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಅಥವಾ www.nirmaanhomes.in ಲಾಗ್ ಆನ್ ಆಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News