ಡಾ. ಸೌಮ್ಯ ಪ್ರವೀಣ್ ಗೆ ಪೋಸ್ಟ್ ಡಾಕ್ಟರಲ್ ಫೆಲೋಶಿಫ್

Update: 2021-09-18 16:39 GMT

ಮಂಗಳೂರು : ಡಾ. ಸೌಮ್ಯ ಪ್ರವೀಣ್ ಕೆ. ಇವರು ಮಂಡಿಸಿದ "ಕಸ್ಟಮರ್ ಪರ್‍ಫೆಕ್ಷನ್ ಟವಡ್ಸ್ ಇ-ಬ್ಯಾಂಕ್ ಸರ್ವೀಸಸ್ - ಎ ಸ್ಟಡೀ ವಿದ್ ರೆಫರೆನ್ಸ್ ಟು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಂಗಳೂರು ಸಿಟಿ" ಎಂಬ ಮಹಾಪ್ರಬಂಧಕ್ಕೆ ಶ್ರೀನಿವಾಸ್ ವಿಶ್ವವಿದ್ಯಾಲಯ, ಮಂಗಳೂರು ಇವರು "ಪೋಸ್ಟ್ ಡಾಕ್ಟರಲ್ ಫೆಲೋಶಿಫ್" ನೀಡಿ ಗೌರವಿಸಿರುತ್ತಾರೆ.

ಇವರು ಡಾ.ಕುಸುಮಾಕರ ಹೆಬ್ಬಾರ್ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ಮಂಡಿಸಿರುತ್ತಾರೆ. ಇವರು ಈ ಸಾಧನೆಗಾಗಿ 7 ಪ್ರಬಂಧ ಗಳನ್ನು ರಚಿಸಿ ಪ್ರಕಟಿಸಿರುತ್ತಾರೆ ಹಾಗೂ ಅತ್ಯಲ್ಪ ಅವಧಿಯಲ್ಲಿ (01.9.2020 - 31.08.21) ಪೂರ್ಣಗೊಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿರು ತ್ತಾರೆ ಹಾಗೂ ಇವರು ಮಂಡಿಸಿರುವ ಸಂಶೋಧನಾ ಪ್ರಬಂಧಕ್ಕಾಗಿ 2021ರ ಗೌರವಾನ್ವಿತ ಪುರಸ್ಕಾರವಾದ "ವಿದ್ಯಾಸರಸ್ವತಿ ರಾಷ್ಟ್ರೀಯ ಪುರಸ್ಕಾರ" ನ್ಯಾಷನಲ್ ಅವಾರ್ಡ್ ಆಫ್ ಎಕ್ಸೆಲೆನ್ಸ್ 2021ನ್ನು ಗ್ಲಾಸಿಯರ್ ಜೆನರಲ್ ರೀಸರ್ಚ್ ಫೌಂಡೇಶನ್, ಅಹಮದಾಬಾದ್ ಇವರು ಡಾ. ಸೌಮ್ಯ ಪ್ರವೀಣ್ ಕೆ. ಇವರಿಗೆ ನೀಡಿ ಗೌರವಿಸಿರುತ್ತಾರೆ.

ಇವರು ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಉಪನ್ಯಾಸಕರಾಗಿರುತ್ತಾರೆ ಹಾಗೂ ಶಕ್ತಿನಗರದ  ಪ್ರವೀಣ್ ನಟ್ಟಿ ಇವರ ಪತ್ನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News