ಉಡುಪಿ : ಡಾ.ಮುದ್ದು ಮೋಹನ್‌ರಿಂದ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ

Update: 2021-09-18 13:32 GMT

ಉಡುಪಿ, ಸೆ.18: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪರ್ಯಾಯ ಅದಮಾರು ಮಠಗಳ ಜಂಟಿ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬೆಂಗಳೂರಿನ ನಿವೃತ್ತ ಐಎಎಸ್ ಅಧಿಕಾರಿ ಡಾ. ಮುದ್ದು ಮೋಹನ್ ಮತ್ತು ತಂಡದಿಂದ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ಸೆ.19ರ ರವಿವಾರ ಸಂಜೆ 6:30ಕ್ಕೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರೂ, ವಾರ್ತಾ ಇಲಾಖೆಯ ಆಯುಕ್ತರೂ ಆಗಿದ್ದ ಡಾ.ಮುದ್ದುಮೋಹನ್ ಹಾಡಿದ ದಾಸರಪದ ಗಳು, ಶರಣರ ವಚನಗಳು ಹಾಗೂ ಕನ್ನಡ ಭಾವಗೀತೆಗಳು ಜನಪ್ರಿಯವಾಗಿದ್ದು ಆಕಾಶವಾಣಿ, ದೂರದರ್ಶನಗಳ ಮೂಲಕ ಈಗಲೂ ಪ್ರಸಾರವಾಗುತ್ತಿವೆ.

ಸಂಗೀತ ಕ್ಷೇತ್ರದ ದಿಗ್ಗಜರಾದ ಪದ್ಮಭೂಷಣ ಡಾ.ಬಸವರಾಜ ರಾಜಗುರು ಹಾಗೂ ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಇವರ ಶಿಷ್ಯರಾದ ಡಾ.ಮುದ್ದುಮೋಹನ್, ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಆಕಾಶವಾಣಿಯ ಹಿರಿಯ ಶ್ರೇಣಿಯ ಕಲಾವಿದರೂ ಆಗಿದ್ದಾರೆ. ಸಂಗೀತ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News