'ಅಸಮರ್ಥ' ನವಜೋತ್ ಸಿಧು ಅವರನ್ನು ಮುಖ್ಯಮಂತ್ರಿಯಾಗಿ ಸ್ವೀಕರಿಸುವುದಿಲ್ಲ: ಅಮರಿಂದರ್ ಸಿಂಗ್

Update: 2021-09-18 15:00 GMT

ಚಂಡೀಗಡ: ಪ್ರತಿಸ್ಪರ್ಧಿ ನವಜೋತ್ ಸಿಂಗ್ ಸಿಧು ಅವರೊಂದಿಗಿನ ಜಟಾಪಟಿಯಿಂದ ಉಂಟಾದ ರಾಜಕೀಯ ಬಿಕ್ಕಟ್ಟು ಉಲ್ಬಣಗೊಂಡ ನಂತರ ಶನಿವಾರ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಅಮರಿಂದರ್ ಸಿಂಗ್, ತಮ್ಮ ಪಕ್ಷದ ಸಹೋದ್ಯೋಗಿ ಸಿಧು ಅವರನ್ನು  ತಮ್ಮ ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸಲು ನಿರಾಕರಿಸಿದರು.

"ನನ್ನ ದೇಶದ ಸಲುವಾಗಿ, ಪಂಜಾಬ್ ಮುಖ್ಯಮಂತ್ರಿಯಾಗಲು ನಾನು ಅವರ (ನವಜೋತ್ ಸಿಂಗ್ ಸಿಧು) ಹೆಸರನ್ನು ವಿರೋಧಿಸುತ್ತೇನೆ. ಇದು ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಸ್ನೇಹಿತ. ಸಿಧು ಅವರು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಜೊತೆ ಸಂಬಂಧ ಹೊಂದಿದ್ದಾರೆ ಸಿಂಗ್ NDTV ಗೆ ತಿಳಿಸಿದರು.

"ನವಜೋತ್ ಸಿಂಗ್ ಸಿಧು ಒಬ್ಬ ಅಸಮರ್ಥ ವ್ಯಕ್ತಿ. ಅವರು ನನ್ನ ಸರಕಾರದಲ್ಲಿ ಸಂಪೂರ್ಣ ವಿಫಲವಾಗಿದ್ದರು. ನಾನು ಅವರಿಗೆ ನೀಡಿದ ಒಂದು ಸಚಿವಾಲಯವನ್ನು ನಡೆಸಲು ಅವರಿಗೆ ಸಾಧ್ಯವಾಗಲಿಲ್ಲ. ಅವರು ಏಳು ತಿಂಗಳ ಕಾಲ ಕಡತಗಳನ್ನು ತೆರವುಗೊಳಿಸಲಿಲ್ಲ" ಎಂದು ಕ್ಯಾಪ್ಟನ್ ಎಂದೇ ಜನಪ್ರಿಯರಾಗಿದ್ದ ಮಾಜಿ ಮುಖ್ಯಮಂತ್ರಿ ಹೇಳಿದರು .

ನನ್ನ ಮುಂದೆ ಬೇರೆ ಆಯ್ಕೆ ಇದೆ, ಸಮಯ ಬಂದಾಗ ಬಳಸುವೆ

ಚುನಾವಣೆಗೆ ಮೊದಲು  ಕಾಂಗ್ರೆಸ್‌ನಲ್ಲಿ ಉಳಿಯುತ್ತೀರೊ ಅಥವಾ ಹೊಸ ಪಕ್ಷ ಕಟ್ಟುತ್ತೀರೊ ಎಂದು ಕೇಳಿದಾಗ, "ಆ ಕುರಿತು ನನಗೆ ಈಗಲೇ ಉತ್ತರಿಸಲು ಸಾಧ್ಯವಿಲ್ಲ. ಯಾವಾಗಲೂ ಒಂದು ಆಯ್ಕೆ ಇರುತ್ತದೆ. ಸಮಯ ಬಂದಾಗ ನಾನು ಆ ಆಯ್ಕೆಯನ್ನು ಬಳಸುತ್ತೇನೆ ... ಈ ಕ್ಷಣದಲ್ಲಿ ನಾನು ಇನ್ನೂ ಕಾಂಗ್ರೆಸ್‌ನಲ್ಲಿದ್ದೇನೆ. ಕಳೆದ 52 ವರ್ಷಗಳಿಂದ ನನ್ನನ್ನು ಬೆಂಬಲಿಸಿದ ನನ್ನ ಜನರೊಂದಿಗೆ ಮಾತನಾಡುತ್ತೇನೆ" ಎಂದು  79 ವರ್ಷದ ಸಿಂಗ್  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News