ಎಸ್‍ಸಿಡಿಸಿಸಿ ಬ್ಯಾಂಕ್‍ನೊಂದಿಗೆ ವ್ಯಾಪಾರ ಅಭಿವೃದ್ಧಿಗೆ ಯುನೈಟೆಡ್ ಟೊಯೋಟಾ ಸಂಸ್ಥೆ ಸಮಾಲೋಚನೆ

Update: 2021-09-18 14:51 GMT

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‍ಸಿಡಿಸಿಸಿ ಬ್ಯಾಂಕ್) ನೊಂದಿಗೆ ವ್ಯಾಪಾರ ಅಭಿವೃದ್ಧಿಯ ಒಡಂಬಡಿಕೆ ಕುರಿತು ಚರ್ಚಿಸಲು ಯುನೈಟೆಡ್ ಟೊಯೋಟಾ ಸಂಸ್ಥೆಯ ಮುಖ್ಯಸ್ಥರು ಶುಕ್ರವಾರ ಬ್ಯಾಂಕಿಗೆ ಭೇಟಿ ನೀಡಿದರು.

ಯುನೈಟೆಡ್ ಟೊಯೊಟಾ ಸಂಸ್ಥೆಯ ವಾಹನವನ್ನು ಖರೀದಿಸಲು ಎಸ್‍ಸಿಡಿಸಿಸಿ ಬ್ಯಾಂಕ್ ನಿಂದ ಗ್ರಾಹಕರಿಗೆ ನೇರವಾಗಿ ಸಾಲ ನೀಡುವುದ ರೊಂದಿಗೆ ಎಸ್‍ಸಿಡಿಸಿಸಿ ಬ್ಯಾಂಕ್ ಹಾಗೂ ಯುನೈಟೆಡ್ ಟೊಯೊಟಾ ಸಂಸ್ಥೆಗಳ ವ್ಯಾಪಾರ ಅಭಿವೃದ್ಧಿ ಹೊಂದಲು ಸಾಧ್ಯ. ಈ ಮೂಲಕ ಗ್ರಾಹಕರನ್ನು ಹೆಚ್ಚು ಆಕರ್ಷಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಉಭಯ ಸಂಸ್ಥೆಗಳು ಸಮಾಲೋಚನೆ ನಡೆಸಿದೆ.

ಎರಡೂ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದ ಈ ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಟಿ.ಜಿ.ರಾಜಾರಾಮ ಭಟ್, ಜೈರಾಜ್ ಬಿ. ರೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ., ಯುನೈಟೆಡ್ ಟೊಯೊಟಾ ಸಂಸ್ಥೆಯ ಉಪಾಧ್ಯಕ್ಷರುಗಳಾದ ತದಶಿ ಅಸಜುಮಾ, ಆರ್ ವೆಂಕಟಕೃಷ್ಣನ್, ಜನರಲ್ ಮೆನೇಜರ್ ಸತ್ಯನಾರಾಯಣನ್, ಡೆಪ್ಯುಟಿ ಜನರಲ್ ಮೆನೇಜರ್ ಸೀಮಂತ್ ಅರುಣ್, ಸೀನಿಯರ್ ಮನೇಜರ್‍ಗಳಾದ ಶಂಭುಭಟ್, ಹರೀಶ್ ಅರಕ್ಕಲ್ ಹಾಗೂ ಬ್ಯಾಂಕಿನ ಮಹಾಪ್ರಬಂಧಕರಾದ ಗೋಪಿನಾಥ್ ಭಟ್ ಕೆ., ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News