ಸೆ.20ರಿಂದ 2 ತಿಂಗಳು ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ

Update: 2021-09-18 14:57 GMT

ಮಂಗಳೂರು, ಸೆ.18: ನಗರ ಹಾಗೂ ಗ್ರಾಮೀಣ ಭಾಗದ ಜನರಲ್ಲಿ ಮತ್ತು ಗಂಡಾಂತರಕಾರಿ ಪ್ರದೇಶಗಳಲ್ಲಿ ವಾಸಿಸುವವರನ್ನು ಗುರಿಯಾಗಿಸಿ ಕೊಂಡು ಜಿಲ್ಲೆಯ ಎಲ್ಲಾ ಕ್ಷಯ ಚಿಕಿತ್ಸಾ ಘಟಕಗಳಲ್ಲಿ ಇದೇ ಸೆ.20ರಿಂದ ಮುಂದಿನ ಎರಡು ತಿಂಗಳವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಹಮ್ಮಿಕೊಳ್ಳಲಾಗಿದೆ.

ಆಂದೋಲನದಲ್ಲಿ ಗಣನೀಯ ಪ್ರಗತಿ ಸಾಧಿಸಲು ಉದ್ದೇಶಿಸಲಾಗಿದ್ದು, ಸಂಬಂಧಿಸಿದವರು ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದ ಜನರು ಮತ್ತು ಗಂಡಾಂತರಕಾರಿ ಪ್ರದೇಶಗಳಲ್ಲಿ ವಾಸಿಸುವ ಜನರು, ಕೊರಗ ಹಾಗೂ ಮಲೆ ಕುಡಿಯ ಸಮುದಾಯದ ಜನರು, ಜೈಲಿನಲ್ಲಿರುವ ಕೈದಿಗಳು, ಸ್ವಾದಾರ್, ಉಜ್ವಲ ಕೇಂದ್ರಗಳ ಜನರು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸ್ಕ್ರೀನಿಂಗ್ ಹಾಗೂ ಸಕ್ರಿಯ ಟಿಬಿ ಪ್ರಕರಣಗಳ ಪತ್ತೆ ಕಾರ್ಯ ಮಾಡುವರು.

ಸೆ.20ರಿಂದ ಮುಂದಿನ ಎರಡು ತಿಂಗಳವರೆಗೆ ಸಕ್ರಿಯ ಟಿಬಿ ಪ್ರಕರಣಗಳ ಪತ್ತೆ ಕಾರ್ಯಕ್ರಮದ ಜೊತೆಗೆ ನಿಕ್ಷಯ್ ಪೋಷಣಾ ಯೋಜನೆ-ಡಿ.ಬಿ.ಟಿ. ಆಂದೋಲನವೂ ನಡೆಯಲಿದೆ.

ಈ ಆಂದೋಲನದ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಭೇಟಿ ನೀಡಿ ಕೋರುವ ಮಾಹಿತಿಯನ್ನು ನೀಡಿ ಸಹಕರಿಸಬೇಕು. ಕ್ಷಯರೋಗದ ಲಕ್ಷಣಗಳು ಕಂಡುಬಂದಲ್ಲಿ ಆರೋಗ್ಯ ಕಾರ್ಯಕರ್ತರ ಸೂಚನೆಯಂತೆ ಕಫ ಪರೀಕ್ಷೆಯನ್ನು ಮಾಡಿಸಿಕೊಳ್ಳುವಂತೆ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News