ಉಡುಪಿ ಜಿಲ್ಲೆಯ 573 ಬಸ್‌ಗಳು ಸಾರಿಗೆ ಕಚೇರಿಯಲ್ಲಿ ಆದ್ಯರ್ಪಣದಲ್ಲಿ: ಆರ್‌ಟಿಓ

Update: 2021-09-18 15:42 GMT

ಉಡುಪಿ, ಸೆ.18: ಕೋವಿಡ್‌ನಿಂದಾಗಿ ಕಳೆದ ಒಂದು ವರ್ಷದಿಂದ 573 ಬಸ್‌ಗಳು ಸಾರಿಗೆ ಕಚೇರಿಯಲ್ಲಿ ಅದ್ಯರ್ಪಣದಲ್ಲಿವೆ. ಅದರಲ್ಲಿ ಕೆಲವು ಬಸ್ ಗಳನ್ನು ಮಾತ್ರ ಅದ್ಯರ್ಪಣದಿಂದ ಮಾಲಕರು ಬಿಡಿಸಿಕೊಳ್ಳುತ್ತಿದ್ದಾರೆ. ಅದ್ಯರ್ಪಣದಿಂದ ಬಿಡುಗಡೆಗೊಳಿಸದೆ ವಾಹನವನ್ನು ಓಡಿಸಿದಲ್ಲಿ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ತೆರಿಗೆಯ ಜೊತೆಗೆ ದಂಡ ತೆರಬೇಕಾಗುತ್ತದೆ. ಈಗಾಗಲೇ ಅನೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಇತ್ತೀಚೆಗೆ ಕೋವಿಡ್‌ನ ವಾರದ ಕೊನೆಯ ಕರ್ಫ್ಯೂ ತೆರವುಗೊಳಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳನ್ನು ಅದ್ಯರ್ಪಣದದಿಂದ ತೆರವುಗೊಳಿಸಲು ಬಸ್ಸು ಮಾಲಕರ ಮನವೊಲಿಸಲಾಗುತ್ತಿದೆ ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಗ್ರಾಮಸ್ಥರೊಬ್ಬರ ಪ್ರಶ್ನೆಗೆ ಅವರು ಉತ್ತರಿಸುತಿದ್ದರು.ಬೈರಂಪಳ್ಳಿ ಗ್ರಾಮದ ಶೇಖರ ಕುಲಾಲ್ ಎಂಬವರು ಕುಂಟಾಲಕಟ್ಟೆ ಜನರ ಪರವಾಗಿ, ಕುಂಟಾಲಕಟ್ಟೆ ಮಾರ್ಗವಾಗಿ ಎಳ್ಳಾರೆಗೆ ಬೆಳಿಗ್ಗೆ ಮತ್ತು ಸಂಜೆ ಬಸ್ಸು ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದರು.

ಈ ಬಗ್ಗೆ ಕ್ರಮಕೈಗೊಳ್ಳಲು ಕೆಎಸ್ಸಾರ್ಟಿಸಿಯವರಿಗೂ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಯು ತಾನಾಗಿಯೇ ಬಗೆಹರಿಯುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಳಿದರು.

ಸಾರ್ವಜನಿಕರು ತಮ್ಮ ವಾಹನದ ವಿಮೆಯ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು. ವಾಹನವು ಅಪಘಾತವಾದಾಗ ವಿಮಾ ಕಂಪೆನಿಯವರು ಟೋಟಲ್ ಲಾಸ್ ಎಂದು ವಿಮೆ ಪರಿಹಾರವನ್ನು ನೀಡಿ ಪುನ: ಬೇರೆಯವರಿಗೆ ವಾಹನ ಮಾರಾಟ ಮಾಡುತ್ತಾರೆ. ಈ ಬಗ್ಗೆ ಜಾಗರೂಕರಾಗಬೇಕು ಎಂದು ಆರ್‌ಟಿಓ ಅವರು ಎಚ್ಚರಿಸಿದರು.

ಸಾರ್ವಜನಿಕರು ತಮ್ಮ ವಾಹನದ ವಿಮೆಯ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು. ವಾಹನವು ಅಪಘಾತವಾದಾಗ ವಿಮಾ ಕಂಪೆನಿಯವರು ಟೋಟಲ್ ಲಾಸ್ ಎಂದು ವಿಮೆ ಪರಿಹಾರವನ್ನು ನೀಡಿ ಪುನ: ಬೇರೆಯವರಿಗೆ ವಾಹನ ಮಾರಾಟ ಮಾಡುತ್ತಾರೆ. ಈ ಬಗ್ಗೆ ಜಾಗರೂಕರಾಗಬೇಕು ಎಂದು ಆರ್‌ಟಿಓ ಅವರು ಎಚ್ಚರಿಸಿದರು. ಈ ಬಗ್ಗೆ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿಯ ಸೀನಿಯರ್ ಡಿಜನಲ್ ಮ್ಯಾನೇಜರ್ ಎಲ್.ಎನ್.ಮುರಳೀಧರ ಮಾತನಾಡಿ, ಈಗ ಹಲವು ವಿಮಾ ಕಂಪೆನಿಗಳು ಅಸ್ತಿತ್ವದಲ್ಲಿದ್ದು, ಸರಕಾರದ ಅಧೀನದಲ್ಲಿರುವ 4 ವಿಮಾ ಕಂಪೆನಿಗಳೊಂದಿಗೆ ಇತರೆ 30 ಖಾಸಗಿ ವಾಹನ ವಿಮಾ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿವೆ. ಸರಕಾರಿ ವಿಮಾ ಕಂಪೆನಿಗಳು ಸರ್ಕಾರದ ಕಾಯಿದೆಯಂತೆ ಕೆಲಸ ನಿರ್ವಹಿಸುತ್ತಿವೆ. ಖಾಸಗಿ ವಿಮಾ ಕಂಪೆನಿಗಳು ಪೈಪೋಟಿ ನಡೆಸುತ್ತಿದ್ದು ಕಾುದೆಯಲ್ಲಿ ಕೆಲವು ಮಾರ್ಪಾಟುಗಳಾಗಿವೆ ಎಂದರು.

ವಾಹನವೊಂದು ಅಪಘಾತವಾದಲ್ಲಿ ವಾಹನದ ಮುಖಬೆಲೆಯ ವಿಮಾ ಮೊತ್ತದ ಶೇ.75ಕ್ಕಿಂತ ಹೆಚ್ಚು ದುರಸ್ಥಿಗೆ ಖರ್ಚಾದರೆ ಸಾಲ್‌ವೇಜ್ ಲಾಸ್/ಟೋಟಲ್ ಲಾಸ್ ಆಧಾರದಲ್ಲಿ ವಿಮಾ ಮೊತ್ತವನ್ನು ವಿಲೇ ಮಾಡಲಾಗುತ್ತದೆ. ಇಲ್ಲಿ ನೋಂದಣಿ ಪ್ರಮಾಣಪತ್ರದೊಂದಿಗೆ ಅಥವಾ ನೋಂದಣಿ ಪ್ರಮಾಣ ಪತ್ರವಿಲ್ಲದೆ ವಿಮಾ ಮೊತ್ತದ ಪರಿಹಾರ ನೀಡಲಾಗುತ್ತದೆ. ನೋಂದಣಿ ಪ್ರಮಾಣಪತ್ರವಿಲ್ಲದೆ ವಿಮಾ ಮೊತ್ತದ ಪರಿಹಾರ ಬೇಗ ಸಿಗುತ್ತದೆ. ವಾಹನವನ್ನು ಪುನ: ರಿಪೇರಿ ಮಾಡಿ ಅವರು ಮಾರಾಟ ಮಾಡುತ್ತಾರೆ. ನೋಂದಣಿ ಪ್ರಮಾಣ ಪತ್ರದೊಂದಿಗೆ ವಿಮಾ ಮತ್ತದ ಪರಿಹಾರ ನೀಡುವಾಗ ವಾಹನವನ್ನು ಒಟ್ಟು ನಷ್ಟವೆಂದು (ಟೋಟಲ್ ಲಾಸ್) ಪರಿಗಣಿಸಿ ವಾಹನವನ್ನು ಗುಜರಿಗೆ ಹಾಕಿ ಉಳಿದ ಮೊತ್ತವನ್ನು ವಿಮಾ ಕಂಪೆನಿಯು ಭರಿಸುತ್ತದೆ. ಮತ್ತು ನಂತರ ನೊಂದಣಿ ಯನ್ನು ರದ್ದುಪಡಿಸಲು ಪ್ರಾದೇಶಿಕ ಸಾರಿಗೆ ಕಛೇರಿಗೆ ಒಪ್ಪಿಸಲೇಬೇಕಾಗುತ್ತದೆ ಎಂದರು.

ಕಡ್ಡಾಯವಾಗಿ ನೋಂದಣಿ ಪ್ರಮಾಣಪತ್ರದೊಂದಿಗೆ ವಿಮಾ ಪರಿಹಾರ ಮೊತ್ತವನ್ನು ಟೋಟಲ್ ಲಾಸ್ ಎಂದು ಪರಿಗಣಿಸುವ ಸಮಯದಲ್ಲಿ ನೋಂದಣಿ ಪತ್ರವನ್ನು ಪ್ರಾದೇಶಿಕ ಸಾರಿಗೆ ಕಛೇರಿಗೆ ರದ್ದು ಪಡಿಸಲು ಸಲ್ಲಿಸಲೇಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಳಿದರು.

ಮಹಾವೀರ ಮೋಟಾರು ಚಾಲನಾ ತರಬೇತಿ ಶಾಲೆಯ ಪ್ರಾಂಶುಪಾಲರಾದ ನೇಮಿರಾಜ ಅರಿಗ ಮಾತನಾಡಿ, ವಾಹನ ವಿಮೆಯನ್ನು ಪಾವತಿಸಿದ್ದರೂ ವಾಹನ ತಂತ್ರಾಂಶದಲ್ಲಿ ಅಪ್‌ಲೋಡ್ ಆಗಲು ತಡವಾಗುತ್ತದೆ. ವಾಹನ ಮಾಲಿಕತ್ವದ ಕಾರ್ಡ್ ಸಿಗುವಾಗ ತಡವಾಗುವುದರಿಂದ ಆ ನಡುವಿನ ಸಮಯ ದಲ್ಲಿ ವಾಹನ ಅಪಘಾತಕ್ಕೀಡಾದರೆ ವಾಹನದ ವಿಮಾ ಪರಿಹಾರ ಮೊತ್ತ ಪಡೆಯಲು ಸಮಸ್ಯೆಯಾಗುತ್ತದೆ ಎಂದರು.

ವಾಹನದ ಮಾಲಕತ್ವ ವರ್ಗಾವಣೆಯಾದ ನಂತರ ಬಿ ವಹಿಯ ಪ್ರತಿಯನ್ನು ಸಲ್ಲಿಸಲು ಅಧಿಕಾರಿ ತಿಳಿಸಿದರು. ವಿಮಾ ಮೊತ್ತವನ್ನು ಪಾವತಿಸಿ 2 ದಿನದೊಳಗೆ (48 ಗಂಟೆಯೊಳಗೆ) ವಾಹನ ತಂತ್ರಾಂಶದಲ್ಲಿ ಅಪ್‌ಲೋಡ್ ಆಗುತ್ತದೆ. ಶೀಘ್ರದಲ್ಲಿ ಅಪ್‌ಲೋಡ್ ಅಪ್‌ಡೇಟ್ ಆಗುವ ಬಗ್ಗೆ ಐಆರ್‌ಎಐಡಿ, ಹೈದರಾಬಾದ್‌ಗೆ ಮನವಿ ಸಲ್ಲಿಸಬಹುದೆಂದರು. ಈಗ ವಿಮಾ ಪತ್ರದಲ್ಲಿ ಬಾರ್‌ಕೋಡ್ ಇರುವುದರಿಂದ ಅದನ್ನೂ ಪರಿಶೀಲಿಸಬಹುದೆಂದು ವಿಮಾ ಕಂಪೆನಿಯವರು ತಿಳಿಸಿದರು.

ವಿಮಾ ಮೊತ್ತವನ್ನು ಚೆಕ್ ರೂಪದಲ್ಲಿ ಪಾವತಿಸಿದಾಗ 7 ದಿನದೊಳಗೆ ನಗದೀಕರಿಸಿಕೊಂಡು ವಿಮಾ ಪತ್ರವನ್ನು ನೀಡಬೇಕು ಅಥವಾ ಮೊದಲ ಹಂತದಲ್ಲಿ ಕವರ್ ನೋಟ್ ಮಾತ್ರ ನೀಡಬಹುದೆಂದು ಸಲಹೆ ನೀಡಿದರು. ಒಂದೆರಡು ತಿಂಗಳ ನಂತರ ವಿಮಾ ಕಂಪೆನಿಯಿಂದ ವಿಮೆಯನ್ನು ರದ್ದು ಪಡಿಸಲಾಗಿದೆ ಎಂದು ಪತ್ರವು ಸಾರಿಗೆ ಕಛೇರಿಗೆ ಬರುತ್ತದೆ. ಕೆಲವರು ಬೋಗಸ್ ವಿಮಾ ಪಾಲಿಸಿ ಮಾಡುತ್ತಾರೆಂದೂ ವಾಹನದ ಚಾಲಕರು/ಮಾಲಕರು ವಾಹನದ ವಿಮೆಯ ಬಗ್ಗೆ ಸರಿಯಾದ ಜ್ಞಾನವನ್ನು ಹೊಂದಿರಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಳಿದರು.

ಅಧಿಕ ದರ ವಸೂಲಿ ದೂರು: ಗಂಗೊಳ್ಳಿಯ ನಾಗರಾಜ ಕಲೇಕಾರ್ ಎಂಬವರು ಮಾತನಾಡಿ, ಕುಂದಾಪುರ ದಿಂದ ಗಂಗೊಳ್ಳಿಗೆ ರಾತ್ರಿ 9:30ಕ್ಕೆ ಬರುತ್ತಿದ್ದ ಎಪಿಎಂ ಬಸ್ಸು ಈಗ ಬರುತ್ತಿಲ್ಲ. ರಜಾ ದಿನಗಳಲ್ಲೂ ಬಸ್ಸು ಸೌಲಭ್ಯವಿರುವುದಿಲ್ಲ. ಕೆಲವು ಬಸ್ಸುಗಳು ಪರವಾನಿಗೆ ಇಲ್ಲದೆ ಓಡಾಡುತ್ತವೆ. ಬಸ್ಸಿನ ಟಿಕೇಟ್ ದರ ಹೆಚ್ಚು ತೆಗೆದುಕೊಳ್ಳುತ್ತಾರೆಂದು ಅವರು ದೂರಿದರು.

ಕೋವಿಡ್‌ನಿಂದಾಗಿ ಬಸ್ಸುಗಳು ಅನುಪಯುಕ್ತತೆಯಲ್ಲಿರುವುದರಿಂದ ಈ ಸಮಸ್ಯೆಯುಂಟಾಗಿದೆ. ಈಗ ಶಾಲಾ ಕಾಲೇಜುಗಳು ಪ್ರಾರಂಭವಾಗುತ್ತಿ ರುವುದರಿಂದ ಮತ್ತು ವಾರಾಂತ್ಯ ಕರ್ಫ್ಯೂ ರದ್ದಾಗಿರುವುದರಿಂದ ಹಲವು ಬಸ್ಸುಗಳು ಅದ್ಯರ್ಪಣದಿಂದ ಬಿಡುಗಡೆಗೊಳ್ಳುತ್ತಿದ್ದು ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲಾಗುವುದೆಂದರು. ಆದಷ್ಟು ಶೀಘ್ರದಲ್ಲಿ ಬಸ್ಸು ದರ ಪರಿಷ್ಕರಣೆಯನ್ನೂ ಮಾಡಿ ಪತ್ರಿಕಾ ಪ್ರಕಟಣೆಯನ್ನು ನೀಡಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಳಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News