ಕರಾಮುವಿ ಪರೀಕ್ಷೆ ಸೆ.27ರಿಂದ ಪ್ರಾರಂಭ

Update: 2021-09-18 15:45 GMT

ಉಡುಪಿ, ಸೆ.18: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2001-02ರಿಂದ 2014-15 ಹಾಗೂ 2018-19ರಿಂದ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದ ಸ್ನಾತಕ/ಸ್ನಾತಕೋತ್ತರ ಪದವಿಗಳಾದ ಬಿ.ಎ/ಬಿ.ಕಾಂ, ಬಿ.ಎಡ್ (ವಿಶೇಷ ಶಿಕ್ಷಣ), ಬಿ.ಲಿಬ್.ಐ.ಎಸ್ಸಿ, ಎಂ.ಎ/ಎಂ.ಕಾಂ, ಎಂ.ಬಿ.ಎ, ಎಲ್.ಎಲ್.ಬಿ, ಎಂ.ಬಿ.ಎ(ಲಾ), ಎಂ.ಟಿ.ಎಂ, ಎಂ.ಎಡ್, ಎಂ.ಲಿಬ್.ಐ.ಎಸ್ಸಿ ಮತ್ತು ಎಲ್ಲಾ ಎಂ.ಎಸ್ಸಿ ಪದವಿಗಳ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದ ಪ್ರಥಮ ಮತ್ತು ದ್ವಿತೀಯ ವರ್ಷದ ಬಿ.ಎ/ಬಿ.ಕಾಂ ಪದವಿ ಹಾಗೂ ಎಂ.ಎ/ಎಂ.ಕಾಂ, ಎಂ.ಬಿ.ಎ/ಎಂ.ಎಸ್ಸಿ ಪದವಿಯ ವಿದ್ಯಾರ್ಥಿಗಳನ್ನು ಹೊರತು ಪಡಿಸಿದ ವಿದ್ಯಾರ್ಥಿಗಳಿಗೆ ವಾರ್ಷಿಕ/ಸೆಮಿಸ್ಟರ್ ಪರೀಕ್ಷೆಗಳನ್ನು ರಾಜ್ಯದ 32 ಪರೀಕ್ಷಾ ಕೇಂದ್ರಗಳಲ್ಲಿ ಸೆಪ್ಟೆಂಬರ್ 27ರಿಂದ ಪ್ರಾರಂಭಿಸಲಾಗುತ್ತಿದೆ.

ಎಲ್ಲಾ ಸ್ನಾತಕ/ಸ್ನಾತಕೋತ್ತರ ಪದವಿಗಳ ವೇಳಾಪಟ್ಟಿ ಹಾಗೂ ಪರೀಕ್ಷಾ ಕೇಂದ್ರಗಳ ವಿವರವನ್ನು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ -www.ksoumysuru.ac.in- ನಲ್ಲಿ ಪ್ರಕಟಿಸಲಾಗಿದೆ.

ಈಗಾಗಲೇ ಪರೀಕ್ಷಾ ಶುಲ್ಕ ಪಾವತಿಸಿರುವ ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಎರಡು ದಿನ ಮುಂಚಿತವಾಗಿ ಪರೀಕ್ಷಾ ಪ್ರವೇಶ ಪತ್ರವನ್ನು ವಿಶವ್ವಿದ್ಯಾನಿಲಯದ ವೆಬ್ ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ನಿಗದಿತ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವಂತೆ ಪ್ರಾದೇಶಿಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ವಿವಿಯ ವೆಬ್‌ಸೈಟ್ ಅಥವಾ ದೂ.ಸಂ: 8800335638 ನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News