ಶಿವಮೊಗ್ಗ: ಸೋಗಾನೆ ಭೂಮಿ ಹಕ್ಕು ರೈತರ ಹೋರಾಟ ಸಮಿತಿಯಿಂದ ಧರಣಿ ಸತ್ಯಾಗ್ರಹ

Update: 2021-09-18 17:23 GMT

ಶಿವಮೊಗ್ಗ: ಸೋಗಾನೆ ಗ್ರಾಮದ ಸುತ್ತಮುತ್ತ ಗ್ರಾಮಗಳ ಸರ್ವೆ ನಂ 120ರಲ್ಲಿ ವಿಮಾನ ನಿಲ್ದಾಣಕ್ಕಾಗಿ ಭೂ ತ್ಯಾಗ ಮಾಡಿದ ರೈತರಿಗೆ ಎಕರೆಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ಆಗ್ರಹಿಸಿ ಸೋಗಾನೆ ಭೂಮಿ ಹಕ್ಕು ರೈತರ ಹೋರಾಟ ಸಮಿತಿಯಿಂದ ಶನಿವಾರ ಧರಣಿ ಸತ್ಯಾಗ್ರಹ ಮಾಡಲಾಯಿತು.

ರೈತ ಮುಖಂಡ ಕೆ.ಟಿ.ಗಂಗಾಧರ್ ಅವರು ಗಾಂಧಿ ಚಿತ್ರದ ಮುಂದೆ ದೀಪ ಹಚ್ಚುವ ಮೂಲಕ ಧರಣಿಗೆ ಚಾಲನೆ ನೀಡಿದರು. 

ಭೂಮಿಯನ್ನು ನೀಡಿ ರೈತರ ಬದುಕು ಮೂರಾಬಟ್ಟೆಯಾಗಿದೆ. ಸಂತ್ರಸ್ತ ಕುಟುಂಬಗಳನ್ನು ಸರಕಾರ ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಭೂಮಿಯನ್ನು ಕಳೆದುಕೊಂಡ ರೈತರಿಗೆ ಸುಸಜ್ಜಿತವಾದ 60/40 ನಿವೇಶನದಲ್ಲಿ ಒಂದು ಆಶ್ರಯ ಮನೆಯನ್ನು ಗೃಹ ಮಂಡಳಿಯ ಮೂಲಕ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಲಾಗಿದೆ.

ಜಮೀನು ಮತ್ತು ಮನೆಯನ್ನು ಕಳೆದುಕೊಂಡ ಯುವಪೀಳಿಗೆಗೆ ಉದ್ಯೋಗ ನೀಡಬೇಕು. ಬೇರೆ ಯೋಜನೆಗೆ ಪಡೆದಂತಹ ಸಂತ್ರಸ್ತ ರೈತರಿಗೆ ಹಿಂದಿನ ನಡವಳಿಯಂತೆ ನಡೆದುಕೊಳ್ಳಬೇಕು. ಇನ್ನುಳಿದಂತೆ, ಜಮೀನು ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತೀ.ನಾ ಶ್ರೀನಿವಾಸ್ ಈ ವೇಳೆ ಮಾತನಾಡಿ, ಹೋರಾಟಕ್ಕೆ ಪೂರ್ಣ ಬೆಂಬಲ ನೀಡುವ ಭರವಸೆಯನ್ನು ನೀಡಿದರು.

ಸಮಿತಿಯ ಪ್ರಮುಖರಾದ ಎಂ.ಬಿ.ಕೃಷ್ಣಪ್ಪ, ಮಹಾದೇವ್, ಚನ್ನಕೇಶವ್, ಶಿವಾನಂದ್, ಕಾಳರಾಜ್, ರಾಮಣ್ಣ, ಶಿವಕುಮಾರ್ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News