ಅಲ್ಜೀರಿಯಾ: ಮಾಜಿ ಅಧ್ಯಕ್ಷ ಅಬ್ದುಲ್ ಅಝೀಝ್ ನಿಧನ

Update: 2021-09-18 17:30 GMT
photo: twitter

ಅಲ್ಜೀರ್ಸ್, ಸೆ.18: ಸುಮಾರು 20 ವರ್ಷ ಅಲ್ಜೀರಿಯಾದ ಅಧ್ಯಕ್ಷರಾಗಿದ್ದ ಅಬ್ದುಲ್ ಅಝೀಝ್ ಬಟೊಫ್ಲೈಕ(84 ವರ್ಷ) ಶುಕ್ರವಾರ ನಿಧನರಾಗಿದ್ದಾರೆ ಎಂದು ಸರಕಾರಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

1999ರಿಂದ 2019ರವರೆಗೆ ಅಲ್ಜೀರಿಯಾದ ಅಧ್ಯಕ್ಷರಾಗಿದ್ದ ಅಬ್ದುಲ್ ಅಝೀಝ್ ‘ದಿ ಫ್ಯಾಂಟಮ್ ಪ್ರೆಸಿಡೆಂಟ್’ ಎಂಬ ಅಡ್ಡಹೆಸರಿನಿಂದ ಜನಪ್ರಿಯರಾಗಿದ್ದರು. ಚುನಾವಣೆಯ ಪ್ರಚಾರ ಕಾರ್ಯದಲ್ಲಿ ವೈಯಕ್ತಿಕವಾಗಿ ಪಾಲ್ಗೊಳ್ಳದಿದ್ದರೂ 2014ರಲ್ಲಿ ಸತತ 4ನೇ ಅವಧಿಗೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದರು.

ಮೊರಕ್ಕೋದಲ್ಲಿ ಜನಿಸಿದ್ದ ಅವರು ಅಲ್ಜೀರಿಯಾದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. 19ನೇ ವಯಸ್ಸಿನಲ್ಲಿ ನ್ಯಾಷನಲ್ ಲಿಬರೇಷನ್ ಆರ್ಮಿಗೆ ಸೇರ್ಪಡೆಗೊಂಡಿದ್ದು 25ನೇ ವಯಸ್ಸಿನಲ್ಲಿ ಸಚಿವರಾಗಿ ನಿಯುಕ್ತಿಗೊಂಡಿದ್ದರು. 1999ರಲ್ಲಿ ದೇಶದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು ದೇಶದಲ್ಲಿ ದೀರ್ಘಾವಧಿಯ ಆಡಳಿತ ನಡೆಸಿದ ಅಧ್ಯಕ್ಷ ಎಂಬ ಹಿರಿಮೆ ಹೊಂದಿದ್ದಾರೆ. 2019ರಲ್ಲಿ 5ನೇ ಅವಧಿಗೆ ಅಧ್ಯಕ್ಷರಾಗಿ ಪುನರಾಯ್ಕೆಗೊಳ್ಳುವ ಅವರ ನಿರ್ಧಾರಕ್ಕೆ ದೇಶದಾದ್ಯಂತ ವ್ಯಾಪಕ ಖಂಡನೆ, ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News