ಟ್ವಿಟರ್ ನಲ್ಲಿ ಕಾಂಗ್ರೆಸ್ ಹೈಕಮಾಂಡ್ ಅನ್ನು ಪರೋಕ್ಷವಾಗಿ ಟೀಕಿಸಿದ್ದ ಅಶೋಕ್ ಗೆಹ್ಲೋಟ್ ಅವರ ಸಹಾಯಕ ರಾಜೀನಾಮೆ

Update: 2021-09-19 07:37 GMT
photo:twitter

ಜೈಪುರ:  ಪಂಜಾಬ್‌ನಲ್ಲಿ ನಾಯಕತ್ವದ ಬದಲಾವಣೆಯ ಬಗ್ಗೆ ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡುವ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಓಎಸ್‌ಡಿ ಲೋಕೇಶ್ ಶರ್ಮಾ ಶನಿವಾರ ರಾತ್ರಿ ರಾಜೀನಾಮೆ ಸಲ್ಲಿಸಿದರು.

 ಬಲಿಷ್ಠ ವ್ಯಕ್ತಿಯನ್ನು ಅಸಹಾಯಕರನ್ನಾಗಿಸುವುದು ಹಾಗೂ ಸಾಧಾರಣ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಏರಿಸುವುದನ್ನು ಈ ಟ್ವೀಟ್ ಉಲ್ಲೇಖಿಸುತ್ತದೆ.

ರಾಜಸ್ಥಾನ ಮುಖ್ಯಮಂತ್ರಿಗೆ ವಿಶೇಷ ಕರ್ತವ್ಯದಲ್ಲಿರುವ ಅಧಿಕಾರಿ ಶರ್ಮಾ ಶನಿವಾರ ರಾತ್ರಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ತನ್ನ  ಟ್ವೀಟ್ ಗೆ ಕ್ಷಮೆ ಕೇಳಿದರು.

ಶರ್ಮಾ ಅವರು ಒಂದು ದಶಕದಿಂದಲೂ ಗೆಹ್ಲೋಟ್‌ನೊಂದಿಗೆ ಬಾಂಧವ್ಯ ಹೊಂದಿದ್ದಾರೆ ಹಾಗೂ  ಗೆಹ್ಲೋಟ್ ಅವರ ಸಾಮಾಜಿಕ ಮಾಧ್ಯಮವನ್ನು ನೋಡಿಕೊಳ್ಳುತ್ತಿದ್ದಾರೆ. ಗೆಹ್ಲೋಟ್ ಡಿಸೆಂಬರ್ 2018 ರಲ್ಲಿ ಅಧಿಕಾರಕ್ಕೆ ಬಂದ ನಂತರ ಶರ್ಮಾ ಅವರನ್ನು ಓಎಸ್‌ಡಿ ಮಾಡಲಾಯಿತು.

2010 ರಿಂದ ಟ್ವಿಟರ್‌ನಲ್ಲಿ ಸಕ್ರಿಯವಾಗಿದ್ದೇನೆ. ಪಕ್ಷದ ವ್ಯಾಪ್ತಿಯನ್ನು ಮೀರಿ ಟ್ವೀಟ್ ಮಾಡಿಲ್ಲ. ಗೆಹ್ಲೋಟ್ ಅವರಿಂದ ಒಎಸ್‌ಡಿ ಜವಾಬ್ದಾರಿಯನ್ನು ಪಡೆದ ನಂತರ ಯಾವುದೇ ರಾಜಕೀಯ ಟ್ವೀಟ್ ಅನ್ನು ಪೋಸ್ಟ್ ಮಾಡಿಲ್ಲ. ತನ್ನ  ಟ್ವೀಟ್ ಪಕ್ಷದ ಹೈಕಮಾಂಡ್ ಹಾಗೂ  ರಾಜ್ಯ ಸರಕಾರವನ್ನು ನೋಯಿಸಿದ್ದರೆ ಕ್ಷಮೆ ಕೇಳುವೆ  ಎಂದು ರಾಜೀನಾಮೆ ಪತ್ರದಲ್ಲಿ ಲೋಕೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News