ಪಡುಬಿದ್ರೆ ಬೀಚ್ ಸ್ವಚ್ಛತಾ ಸ್ಪರ್ಧೆ: 685 ಕೆ.ಜಿ. ಕಸ ಸಂಗ್ರಹ

Update: 2021-09-19 07:45 GMT

ಪಡುಬಿದ್ರೆ : ಅಂತರ್ ರಾಷ್ಟ್ರಿಯ ಕಡಲ ತೀರದ ಸ್ವಚ್ಛತಾ ದಿನಾಚರಣೆಯ ಅಂಗವಾಗಿ ಶನಿವಾರ ಪಡುಬಿದ್ರೆಯ ಬೀಚ್‍ನಲ್ಲಿ ಏರ್ಪಡಿಸಲಾದ ಬೀಚ್ ಸ್ವಚ್ಛತಾ ಸ್ಪರ್ಧೆಯಲ್ಲಿ ಒಟ್ಟು  685 ಕೆ.ಜಿ. ಜೈವಿಕ ವಿಘಟನೀಯವಲ್ಲದ ಕಸವನ್ನು ಸಂಗ್ರಹ ಮಾಡಲಾಯಿತು.

ಪಡುಬಿದ್ರೆ ಬೀಚ್‍ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸ್ಪರ್ಧೆಯಲ್ಲಿ ಐದು ತಂಡಗಳಲ್ಲಿ ಒಟ್ಟು 100ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಪಡುಬಿದ್ರೆ ಬೀಚ್‍ನಿಂದ ಬ್ಲೂ ಫ್ಲ್ಯಾಗ್ ಬೀಚಿನ ತನಕ 1.7 ಕಿ.ಮೀ ಉದ್ದದ ಕಡಲ ತೀರವನ್ನು ಸ್ವಚ್ಛಗೊಳಿಸಲಾಯಿತು. ಕರಾವಳಿ ಸ್ಟಾರ್ಸ್ ನಡಿಪಟ್ನ ಪಡುಬಿದ್ರಿ ಪ್ರಥಮ ಬಹುಮಾನ ಹಾಗೂ ವಿಜಯಾ ಕಾಲೇಜು ಮುಲ್ಕಿ ದ್ವಿತೀಯ ಬಹುಮಾನ ಪಡೆದುಕೊಂಡಿತು. 

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಕ್ಲಿಫರ್ಡ್ ಲೋಬೊ ಮಾತನಾಡಿ, ಕಡಲ ತೀರದ ಸ್ವಚ್ಛವಾಗಿ ಇಡುವ ಮೂಲಕ ಪ್ರವಾಸಿಗರನ್ನು ಇನ್ನಷ್ಟು ಸೆಳೆಯಲು ಸಹಕಾರಿಯಾಗುತ್ತದೆ. ಈ ಮೂಲಕ ಕಡಲ ತೀರವನ್ನು ಸ್ವಚ್ಛವಾಗಿ ಇಡಬೇಕು ಎಂದು ಸಲಹೆ ನೀಡಿದರು. 
ಸಾಯಿರಾಧ ಗ್ರೂಪ್‍ನ ಮನೋಹರ ಶೆಟ್ಟಿ, ಕಾಡಿಪಟ್ನ ಮೊಗವೀರ ಸಭಾದ ಅಧ್ಯಕ್ಷ ಅಶೋಕ್ ಸಾಲ್ಯಾನ್, ತುಂಗಭದ್ರಾ ಸರ್ವಿಸಸ್‍ನ ಗಣೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಬ್ಲೂ ಫ್ಲ್ಯಾಗ್ ಬೀಚ್ ಮ್ಯಾನೇಜರ್ ವಿಜೇತ್ ನಾಯಕ್ ಸ್ವಾಗತಿಸಿದರು. ಬೀಚ್ ಸುಪರ್ವೈಸರ್ ಕಿರಣ್ ರಾಜ್ ಕರ್ಕೇರ ವಂದಿಸಿದರು. ಸಿಬ್ಬಂದಿ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News