ಪಡುಬಿದ್ರೆ : ಅಲ್ ರಿಹಾ ವಿವಿಧೋದ್ದೇಶ ಸಹಕಾರಿ ಸಂಘದ ಶಾಖೆ ಉದ್ಘಾಟನೆ

Update: 2021-09-19 08:39 GMT

ಪಡುಬಿದ್ರೆ : ಕಾಪುವಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅಲ್ ರಿಹಾ ವಿವಿಧೋದ್ದೇಶ ಸಹಕಾರಿ ಸಂಘದ ಪಡುಬಿದ್ರೆ ಶಾಖೆಯ ಉದ್ಘಾಟನೆಯು ಪಡುಬಿದ್ರೆಯ ನಯಾತ್ ರೆಸಿಡೆನ್ಸಿ ಕಟ್ಟಡದಲ್ಲಿ ರವಿವಾರ ನಡೆಯಿತು.

ಸಮಾರಂಭದಲ್ಲಿ ಲಾಕರ್ ಉದ್ಘಾಟಿಸಿದ ಪಡುಬಿದ್ರೆ ಸಿಎ ಬ್ಯಾಂಕ್ ಅಧ್ಯಕ್ಷ ವೈ. ಸುಧೀರ್ ಕುಮಾರ್ ಮಾತನಾಡಿ, ಯಾವುದೇ ಸಹಕಾರಿ ಸಂಸ್ಥೆಗಳು ಬೆಳೆಯಲು ಸಿಬ್ಬಂದಿಗಳ ಸಹಕಾರ ಅತೀ ಅಗತ್ಯ. ಬ್ಯಾಂಕ್‍ನ ಬಲಿಷ್ಠತೆ ಜನರಲ್ಲಿ ವಿಶ್ವಾಸ ಮೂಡಿಸುತ್ತದೆ. ಅಲ್ ರಿಹಾ ವಿವಿಧೋದ್ದೇಶ ಸಹಕಾರಿ ಸಂಘ ಉತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದು, ಗ್ರಾಹಕರು, ನಿರ್ದೇಶಕರ ಮಂಡಳಿ ಹಾಗೂ ಸಿಬ್ಬಂದಿ ಸಹಕಾರದಿಂದ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಅಲ್ ರಿಹಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎಚ್. ಅಬ್ದುಲ್ಲಾ ಮಾತನಾಡಿ, ಕಾಪುವಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಂಸ್ಥೆ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತಿದ್ದು, ಶಿರ್ವ ಹಾಗೂ ಪಡುಬಿದ್ರೆಯಲ್ಲಿ ಶಾಖೆಯನ್ನು ಹೊಂದಿದ್ದು, ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಗ್ರಾಹಕರಿಂದ ಉತ್ತಮ ಸ್ಪಂಧನೆ ವ್ಯಕ್ತವಾಗುತ್ತಿದೆ ಎಂದರು.

ಶಾಖೆಯ ಕಚೇರಿಯನ್ನು ಪಡುಬಿದ್ರೆ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಪಿ.ಕೆ. ಮೊಹಿಯುದ್ದೀನ್ ಉದ್ಘಾಟಿಸಿದರು. ಮಾಜಿ ತಾ. ಪಂ. ಸದಸ್ಯ ನವೀನ್‍ ಚಂದ್ರ ಜೆ. ಶೆಟ್ಟಿ ಕ್ಯಾಶ್ ಕೌಂಟರ್, ಪಡುಬಿದ್ರೆ ಗ್ರಾಮ ಪಂ. ಅಧ್ಯಕ್ಷ ರವಿ ಶೆಟ್ಟಿ ಸಿಬ್ಬಂದಿಗಳ ಕಚೇರಿಯನ್ನು, ಕಂಪ್ಯೂಟರ್ ವಿಭಾಗವನ್ನು ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ ಚಂದ್ರ, ಕಟ್ಟಡದ ಮಾಲಕ ಮಿಥುನ್ ಶೆಟ್ಟಿ ಖಾತೆಯನ್ನು ತೆರೆಯುವ ಮೂಲಕ ಉದ್ಘಾಟಿಸಿದರು. ಫಲಿಮಾರು ಗ್ರಾಮ ಪಂ. ಮಾಜಿ ಅಧ್ಯಕ್ಷ ಜಿತೇಂದ್ರ ಪುರ್ಟಾಡೋ ಠೇವಣಿ ಪತ್ರವನ್ನು ಬಿಡುಗಡೆಗೊಳಿಸಿದರು.

ನಿರ್ದೇಶಕರುಗಳಾದ ನವೀದ್ ನಾಸಿರ್ ಶೇಖ್, ಮಹಮ್ಮದ್ ಫಕೀರ್, ಹಸನಬ್ಬ ಶೇಖ್,  ಅಬ್ದುಲ್ ಹಮೀದ್ ಮೂಳೂರು. ಶಫಿ ಅಹ್ಮದ್, ಮುಹಮ್ಮದ್  ಸಾದಿಕ್,  ಝೀನತ್ ಬಾನು,  ಸಬಿಯಾ ಖಾತೂನ್,  ಫರೀದಾ  ಬಾನು,  ಮುಖ್ಯ  ಪ್ರಬಂಧಕರಾದ ಗೀತಾ  ಎ. ಪಿ,  ಅಬ್ದುಲ್ ರಹ್ಮಾನ್ ಪಡುಬಿದ್ರೆ ಉಪಸ್ಥಿತರಿದ್ದರು.

ನಿರ್ದೇಶಕ ಎಂ.ಪಿ.ಮೊಯ್ದಿನಬ್ಬ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News