ಕಿನ್ಯದಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರ

Update: 2021-09-19 09:07 GMT

ಉಳ್ಳಾಲ : ಗೋಲ್ಡನ್ ವೆಲ್ಫೇರ್ ಹೆಲ್ತ್ ಚಾರಿಟೇಬಲ್ ಟ್ರಸ್ಟ್ ಕಿನ್ಯ ಇದರ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವು ಅಲ್ ಮದ್ರಸತುಲ್ ಕುತುಬಿಯ್ಯಾ ಸಭಾಂಗಣದಲ್ಲಿ ರವಿವಾರ ನಡೆಯಿತು.

ಡಾ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೋಲ್ಡನ್ ವೆಲ್ಫೇರ್ ಹೆಲ್ತ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮೂಸಾ ಅಬ್ಬಾಸ್ ಕುರಿಯಕಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ಎನ್.ಇಬ್ರಾಹೀಂ ಉಸ್ತಾದ್ ದುಆ ನೆರವೇರಿಸಿದರು. ಪ್ರ. ಕಾರ್ಯದರ್ಶಿ ಅಬ್ದುಲ್ ಸಮದ್ ಕಿನ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಿನ್ಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯೀಲ್ ಹಾಜಿ ಕಿನ್ಯ, ಡಾ. ಅಫ್ರಾ ಇಸ್ಮಾಯೀಲ್, ಎ ವನ್ ಇಬ್ರಾಹೀಂ, ಡಾ.ಇಕ್ಬಾಲ್, ಝಿರಾರ್ ಅಬ್ದುಲ್ಲಾ ಕಾಸರಗೋಡು, ಇ.ಕೆ.ಇಬ್ರಾಹೀಂ, ಅಬೂಬಕರ್ ಹಾಜಿ, ಬಶೀರ್ ಕಿನ್ಯ, ಅಬ್ಬು ಕಿನ್ಯ, ಇಸ್ಮಾಯೀಲ್ ಸಾಗ್ ಅಬ್ದುಲ್ಲಾ, ಇಸ್ಮಾಯೀಲ್ ಪರಮಾಂಡ ,ಫಾರೂಕ್ ಕಿನ್ಯ, ಮುಹಮ್ಮದ್ ರಹ್ಮತ್ ನಗರ, ಹನೀಫ್ ಸಾಗ್ ಬಾಗ್ ಮತ್ತಿತರರು ಉಪಸ್ಥಿತರಿದ್ದರು.

ಹಮೀದ್ ಕಿನ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಖಾದರ್ ಪದಿಯರೆಕ್ಕಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News