×
Ad

ದಿಲ್ಲಿ:'ಭ್ರಷ್ಟಾಚಾರ' ಆರೋಪದಲ್ಲಿ ಮೂವರು ಕೌನ್ಸಿಲರ್‌ಗಳನ್ನು ಉಚ್ಚಾಟಿಸಿದ ಬಿಜೆಪಿ

Update: 2021-09-19 15:13 IST

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳು ಸಮೀಪಿಸುತ್ತಿರುವಾಗ ಭಾರತೀಯ ಜನತಾ ಪಕ್ಷದ ರಾಜ್ಯ ಘಟಕವು 'ವಿಪರೀತ ಆರ್ಥಿಕ ಭ್ರಷ್ಟಾಚಾರ' ದ ದೂರುಗಳ ಮೇಲೆ ಆರು ವರ್ಷಗಳ ಕಾಲ ಮೂವರು ಹಾಲಿ ಕೌನ್ಸಿಲರ್ ಗಳನ್ನು ಪಕ್ಷದ ಸದಸ್ಯತ್ವದಿಂದ ಉಚ್ಚಾಟಿಸಿದೆ. ಹೊರಹಾಕಲ್ಪಟ್ಟ ಮೂವರು ಕೌನ್ಸಿಲರ್‌ಗಳಲ್ಲಿ ಇಬ್ಬರು ಆಮ್ ಆದ್ಮಿ ಪಕ್ಷಕ್ಕೆ ಸೇರುವ ನಿರೀಕ್ಷೆಯಿದೆ.

ದಿಲ್ಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಅವರು ಮೂವರು ಕೌನ್ಸಿಲರ್‌ಗಳಿಗೆ ಪತ್ರ ಬರೆದಿದ್ದಾರೆ. ನ್ಯೂ ಅಶೋಕ್ ನಗರದಿಂದ ರಜನಿ ಬಬ್ಲು ಪಾಂಡೆ, ಮುಖರ್ಜಿ ನಗರದಿಂದ ಪೂಜಾ ಮದನ್ (ವಾರ್ಡ್ N-15) ಹಾಗೂ ಸೈದ್-ಉಲ್-ಅಜೈಬ್‌ನಿಂದ ಸಂಜಯ್ ಠಾಕೂರ್ ಅವರಿಗೆ ಪಕ್ಷದ ನಿರ್ಧಾರದ ಬಗ್ಗೆ ರವಿವಾರ ತಿಳಿಸಲಾಗಿದೆ.

ಬಿಜೆಪಿಯಿಂದ ತನಗೆ ಸಮರ್ಪಕ ಬೆಂಬಲ ನೀಡುತ್ತಿಲ್ಲ ಹಾಗೂ ಹಣದ ಕೊರತೆಯಿಂದಾಗಿ ತನ್ನ ಮತದಾರರಿಗೆ ನೀಡಿದ ಭರವಸೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂದು ಪೂಜಾ ಮದನ್ ಹೇಳಿದರು.

"ನಾನು ಇಂದು ಎಎಪಿಗೆ ಸೇರುವುದಾಗಿ ಒಂದೆರಡು ದಿನಗಳ ಹಿಂದೆ ಬಿಜೆಪಿಗೆ ತಿಳಿಸಿದ್ದೆ. ನನ್ನನ್ನು ಹೊರಹಾಕಲು ಅವರು ಇಲ್ಲಿಯವರೆಗೆ ಏಕೆ ಕಾಯುತ್ತಿದ್ದರು? ನಾನು ಎಎಪಿಗೆ ಸೇರುತ್ತೇನೆ ಎಂದು ನಾನು ಅವರಿಗೆ ಹೇಳಿದಾಗ, ಅವರು ನನ್ನನ್ನು ಉಳಿಯುವಂತೆ ಕೇಳಿದರು. ನಾನು ಭ್ರಷ್ಟನಾಗಿದ್ದರೆ, ಅವರು ನನ್ನನ್ನು ಉಳಿಯಲು ಏಕೆ ಕೇಳಿದರು? ನನಗೆ ಮತ ನೀಡಿದ ಜನರಿಗಾಗಿ ನಾನು ಕೆಲಸ ಮಾಡಲು ಬಯಸುತ್ತೇನೆ, ”ಎಂದು ಅವರು ಪೂಜಾ ಮದನ್ ಹೇಳಿದರು. ಸಂಜಯ್ ಠಾಕೂರ್ ಎಎಪಿಗೆ ಸೇರುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News