×
Ad

‘ಅಮ್ಚೆ ಸಂಸಾರ್’ ಕೊಂಕಣಿ ಚಿತ್ರದ ಪೊಸ್ಟರ್, ಟ್ರೇಲರ್, ಧ್ವನಿಸುರುಳಿ ಬಿಡುಗಡೆ

Update: 2021-09-19 19:52 IST

ಉಡುಪಿ, ಸೆ.19: ಬಹುಭಾಷಾ ಯುವಕಲಾದ ಸಂದೀಪ್ ಕಾಮತ್ ಅಜೆಕಾರು ಇವರ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ಅಮ್ಚೆ ಸಂಸಾರ್ ಕೊಂಕಣಿ ಭಾಷಾ ಚಲನಚಿತ್ರದ ಪೊಸ್ಟರ್, ಟ್ರೇಲರ್, ಧ್ವನಿ ಸುರುಳಿ ಬಿಡುಗಡೆ ಸಮಾರಂಭವು ಶುಕ್ರವಾರ ಮಣಿಪಾಲ ಆರ್‌ಎಸ್‌ಬಿ ಸಭಾ ಭವವನ ದಲ್ಲಿ ಜರಗಿತು.

ಕಾರ್ಯಕ್ರಮವನ್ನು ಮಣಿಪಾಲ ಆರ್‌ಎಸ್‌ಬಿ ಮಳಾ ವೇದಿಕೆಯ ಅಧ್ಯಕ್ಷೆ ಮೋನಿ ಎನ್.ನಾಯಕ್ ಉದ್ಘಾಟಿಸಿದರು. ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ಬಂಟಕಲ್ಲು -ಮಣಿಪಾಲ ಇದರ ಅಧ್ಯಕ್ಷ ಎಮ್.ಗೋಕುಲ್‌ದಾಸ್ ನಾಯಕ್ ಚಿತ್ರದ ಪೋಸ್ಟರ್ ಹಾಗೂ ಮುಂಬೈಯ ಉದ್ಯಮಿ ವಸಂತ ಆರ್. ನಾಯಕ್ ಚಿತ್ರದ ಟ್ರೇಲರ್, ಹಿರ್ಗಾನ ಶ್ರೀಕ್ಷೇತ್ರ ಲಕ್ಷ್ಮೀಪುರದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್ ಧ್ವನಿಸುರುಳಿ ಬಿಡುಗಡೆ ಮಾಡಿದರು.

ನಿವೃತ್ತ ಕಾರ್ಯಪಾಲ ಅಭಿಯಂತ ಜಯಾನಂದ ನಾಯಕ್ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಉಡುಪಿ ಗೀತಾಂಜಲಿ ಸಿಲ್ಕ್ ಹೌಸ್‌ನ ಮಾಲಕ ರಾಮಕೃಷ್ಣ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಶ್ರೀಶ ನಾಯಕ್ ಪೆರ್ನಂಕಿಲ, ಜಿಪಂ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಬಂಟಕಲ್ಲು ದೇವಳದ ಅಡಳಿತ ಮೊಕ್ತೇಸರ ಶಶಿಧರ್ ವಾಗ್ಲೆ, ನರಸಿಂಗೆ ದೇವಳದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವಣ್‌ಕಾರ್, ಆರ್‌ಎಸ್‌ಬಿ ಯುವವೃಂದ ಗೌರವ ಅಧ್ಯಕ್ಷ ಕೆ.ಆರ್.ಪಾಟ್ಕರ್, ಕಾರ್ಕಳ ಮಹಿಳಾ ಮಂಡಳಿ ಅಧ್ಯಕ್ಷೆ ಉಷಾ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

ಚಿತ್ರ ನಿರ್ದೇಶಕ ಸಂದೀಪ್ ಕಾಮತ್ ಪ್ರಾಸ್ತಾಕವಾಗಿ ಮಾತನಾಡಿದರು. ಸಿನೇಮಾಟೋಗ್ರಾಫರ್ ಭುವನೇಶ್ ಪ್ರಭು ಸಹಕರಿಸಿದರು. ಬಿ.ಪುಂಡಲೀಕ ಮರಾಠೆ ನಿರೂಪಿಸಿದರು. ರವೀಂದ್ರ ಕಾಮತ್ ಸಣ್ಣಕ್ಕಿಬೆಟ್ಟು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News