ಉಡುಪಿ ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಯೇಶನ್ ಉದ್ಘಾಟನೆ

Update: 2021-09-19 15:56 GMT

ಉಡುಪಿ, ಸೆ.19: ಉಡುಪಿ ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಯೇಶನ್ ಹಾಗೂ ಕಿಕ್ ಬಾಕ್ಸಿಂಗ್ ತರಬೇತಿಗೆ ರವಿವಾರ ಅಂಬಲಪಾಡಿ ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಚಾಲನೆ ನೀಡಲಾಯಿತು.

ಉಡುಪಿ ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಯೇಶನ್ ಅಧ್ಯಕ್ಷ ವಾಮನ್ ಪಾಲನ್ ಮಾತನಾಡಿ, ಉಡುಪಿಯಲ್ಲಿ ಸೋಮವಾರ ಹಾಗೂ ಗುರುವಾರ ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪದಲ್ಲಿ ತರಬೇತಿ ನೀಡಲಾಗು ವುದು. ಈಗಾಗಲೇ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಈ ಕಿಕ್ ಬಾಕ್ಸಿಂಗ್‌ನಲ್ಲಿ ವಿವಿಧ ವಿಭಾಗಗಳಿದ್ದು ಪ್ರತಿಯೊಂದು ವಿಭಾಗದಲ್ಲಿ ಸ್ಪರ್ದೆಗಳಿರುತ್ತದೆ ಎಂದು ತಿಳಿಸಿದರು.

ಈಗಾಗಲೇ ಈ ಅಸೋಸಿಯೆಶನ್ ರಾಷ್ಟ್ರೀಯ ಮಟ್ಟದಲ್ಲಿ ಮೂರು ಬೆಳ್ಳಿಯ ಪದಕಗಳನ್ನು ಪಡೆದಿದೆ. ನುರಿತ ತರಭೇತುದಾರರು ಕಿಕ್ ಬಾಕ್ಸಿಂಗ್ ತರಭೇತಿ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ 16 ಜಿಲ್ಲೆಗಳಲ್ಲಿ ಕಿಕ್ ಬಾಕ್ಸಿಂಗ್ ಅಸೋಸಿ ಯೇಶನ್ ಅಸ್ಥಿತ್ವದಲ್ಲಿದ್ದು ಅನೇಕ ಕ್ರೀಡಾಪಟುಗಳು ಇದರ ತರಬೇತಿ ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ ವಿಜಯ್ ಬಲ್ಲಾಳ್ ಉದ್ಘಾಟಿಸಿ ಶುಭ ಹಾರೈಸಿದರು. ವಾಕೋ ಇಂಡಿಯಾ ಮಹಿಳಾ ಘಟಕದ ಚೇರ್ಮೆನ್ ಪೂಜಾ ಹರ್ಷ, ವಾಕೋ ಇಂಡಿಯಾದ ಅಂತಾ ರಾಷ್ಟ್ರೀಯ ರೆಪ್ರಿ ಹರ್ಷ ಶಂಕರ್ ಮುಖ್ಯ ಅತಿಥಿಗಳಾಗಿದ್ದರು.

ಪ್ರಾಂಶುಪಾಲೆ ಜೋಸ್ಲೀ ಡಿಸೋಜ, ಸಂತೋಷ್ ಅಮೀನ್, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಪ್ರವೀಣ್ ಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಶೆಟ್ಟಿ, ನ್ಯಾಯವಾದಿ ಪ್ರಶಾಂತ್ ಸಾಗರ್, ಜಿಲ್ಲಾ ಬಿಜೆಪಿ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಮಂಗಳೂರು ಕಿಕ್ ಬಾಕ್ಸಿಂಗ್ ಅಸೋಸಿಯೇಶನ್ನ ದ.ಕ. ಜಿಲ್ಲಾಧ್ಯಕ್ಷ ನಿತಿನ್ ಸುವರ್ಣ, ರಾಜು ಪೂಜಾರಿ, ಚಂದ್ರಶೇಖರ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News