ಮುಕ್ಕ ಜುಮಾ ಮಸೀದಿಯಲ್ಲಿ ಮಾದಕ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮ

Update: 2021-09-19 16:06 GMT

ಮುಕ್ಕ:  ಮುಕ್ಕ ಜುಮಾ ಮಸೀದಿ ಮತ್ತು ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್ ಮೆಂಟ್ ಕೌನ್ಸಿಲ್- ಮಸ್ಜಿದ್ ಒನ್ ಮೂಮೆಂಟ್, ದಕ್ಷಿಣ ಕನ್ನಡ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಮಾದಕ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮವು ಮುಕ್ಕ  ಅಂಜುಮಾನ್ ಸಿರಾಜುಲ್ ಇಸ್ಲಾಂ  ಮದ್ರಸದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮುಕ್ಕ  ಜುಮಾ ಮಸೀದಿಯ ಮುದರ್ರಿಸ್ ವಿ.ಎ. ಮನ್ಸೂರ್ ಮದನಿ ವಳವೂರು ಉದ್ಘಾಟಿಸಿದರು. ಮುಕ್ಕ ಜುಮಾ ಮಸೀದಿ ಅಧ್ಯಕ್ಷ ಹಾಜಿ ಎಂ. ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿ ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್ ಮೆಂಟ್ ಕೌನ್ಸಿಲ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹಾಜಿ ಅಹ್ಮದ್ ಮುಹಿಯುದ್ದೀನ್ ವರ್ಲ್ಡ್ ವೈಡ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್ ಮೆಂಟ್ ಕೌನ್ಸಿಲ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ಮಾಸ್ಟರ್ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ತರಗತಿ ನಡೆಸಿದರು.

ವೇದಿಕೆಯಲ್ಲಿ ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್ ಮೆಂಟ್ ಕೌನ್ಸಿಲ್ ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ಕಾರ್ಯದರ್ಶಿ ಝಾಕಿರ್ ಇಖ್ಲಾಸ್, ಕಾರ್ಯಕ್ರಮ ಸಂಯೋಜಕ ರಾಝಿಕ್ ಮೂಲರಪಟ್ನ, ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸದ ಸದರ್ ಮುಅಲ್ಲಿಮ್ ಇಬ್ರಾಹಿಂ ಫಾಳಿಲಿ, ಹನಫಿ ಮುಅಲ್ಲಿಮ್ ಅಖ್ತರ್ ಮೊದಲಾದವರು ಉಪಸ್ಥಿತರಿದ್ದರು.

ಮುಕ್ಕ ಜುಮಾ ಮಸೀದಿಯ ಕೋಶಾಧಿಕಾರಿ ಎಂ. ಮೊಯ್ದಿನ್ ಮುಕ್ಕ  ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.  ಮುಕ್ಕ ಜುಮಾ ಮಸೀದಿಯ ಪ್ರಧಾನ  ಕಾರ್ಯದರ್ಶಿ ಎಂ.ಸಿ.ಉಮರ್ ಫಾರೂಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News