ತಾನು ಸ್ವೀಕರಿಸಿದ್ದ ಉಡುಗೊರೆಗಳ ಹರಾಜಿನಲ್ಲಿ ಪಾಲ್ಗೊಳ್ಳುವಂತೆ ಜನತೆಗೆ ಪ್ರಧಾನಿ ಮೋದಿ ಆಗ್ರಹ

Update: 2021-09-19 16:22 GMT

ಹೊಸದಿಲ್ಲಿ,ಸೆ.19: ತಾನು ಸ್ವೀಕರಿಸಿರುವ ಹಲವಾರು ಉಡುಗೊರೆಗಳು ಮತ್ತು ಸ್ಮರಣಿಕೆಗಳ ಹರಾಜಿನಲ್ಲಿ ಪಾಲ್ಗೊಳ್ಳುವಂತೆ ರವಿವಾರ ಜನತೆಯನ್ನು ಆಗ್ರಹಿಸಿರುವ ಪ್ರಧಾನಿ ನರೇಂದ್ರ ಮೋದಿಯವರು,‘ಇವುಗಳಲ್ಲಿ ನಮ್ಮ ಒಲಿಂಪಿಕ್ಸ್ ಹಿರೋಗಳು ನೀಡಿರುವ ಸ್ಮರಣಿಕೆಗಳೂ ಸೇರಿವೆ. ಹರಾಜಿನಿಂದ ಬರುವ ಹಣವು ನಮಾಮಿ ಗಂಗೆ ಉಪಕ್ರಮಕ್ಕೆ ಬಳಕೆಯಾಗಲಿದೆ ’ ಎಂದು ಟ್ವೀಟಿಸಿದ್ದಾರೆ.

 ಕೃಷ್ಣ ನಾಗರ್ ಮತ್ತು ಎಸ್.ಎಲ್.ಯತಿರಾಜ ಅವರ ಬ್ಯಾಡ್ಮಿಂಟನ್ ರ್ಯಾಲಿ ಕೆಟ್ ಗಳು,ನೀರಜ ಚೋಪ್ರಾರ ಜಾವೆಲಿನ್ ಮತ್ತು ಲವ್ಲಿನಾ ಬೊರ್ಗೊಹೈನ್ ಅವರ ಗ್ಲೋವ್ಗಳು ಒಳಗೊಂಡಂತೆ ಭಾರತದ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ತಾರೆಯರ ಕ್ರೀಡಾ ಉಪಕರಣಗಳು ಮತ್ತು ಇತರ ಪರಿಕರಗಳು ಸಂಸ್ಕೃತಿ ಸಚಿವಾಲಯವು ನಡೆಸುತ್ತಿರುವ ಈ ಹರಾಜಿನಲ್ಲಿ ಗರಿಷ್ಠ ಬಿಡ್ ಗಳನ್ನು ಸೆಳೆಯುತ್ತಿರುವ ಸ್ಮರಣಿಕೆಗಳಲ್ಲಿ ಸೇರಿವೆ. ನಮಾಮಿ ಗಂಗೆ ಅಭಿಯಾನವು ಗಂಗಾ ನದಿಯ ಸಂರಕ್ಷಣೆ ಮತ್ತು ಪುನರುಜ್ಜೀವನದ ಉದ್ದೇಶವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News