ಸೆ.20ರಿಂದ ದ.ಕ.ಜಿಲ್ಲೆಯಲ್ಲಿ 6, 7ನೆ ಭೌತಿಕ ತರಗತಿಗಳು ಆರಂಭ

Update: 2021-09-19 16:39 GMT

ಮಂಗಳೂರು, ಸೆ.19: ದ.ಕ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಕಡಿಮೆಯಾಗುತ್ತಲೇ ಶಾಲೆಗಳ ಭೌತಿಕ ತರಗತಿ ಆರಂಭಿಸಲು ಮುಂದಾದ ಜಿಲ್ಲಾಡಳಿತಕ್ಕೆ ವಿದ್ಯಾರ್ಥಿಗಳು ಮತ್ತು ಹೆತ್ತವರು/ಪೋಷಕರಿಂದ ಸಕಾರಾತ್ಮಕ ಸ್ಪಂದನ ವ್ಯಕ್ತವಾಗಿದೆ.

ಸೆ.20ರಿಂದ 6 ಮತ್ತು 7ನೆ ತರಗತಿಗಳು ಆರಂಭವಾಗಲಿದೆ. ಅದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕ ವೃಂದ, ಎಸ್‌ಡಿಎಂಸಿ ಸಮಿತಿ, ಖಾಸಗಿ ಶಾಲೆಗಳ ಆಡಳಿ ಮಂಡಳಿಯು ಸಂಪೂರ್ಣ ಸಜ್ಜಾಗಿದೆ.

ಸೆ.20ರಂದು ದ.ಕ. ಜಿಲ್ಲೆಯಲ್ಲಿ 6 ಮತ್ತು 7ನೆ ತರಗತಿಯು ಬೆಳಗ್ಗೆ ನಡೆಯಲಿದೆ. ಜೊತೆಗೆ ಈಗಾಗಲೆ ಆರಂಭಗೊಂಡಿರುವ 9 ಮತ್ತು 10ನೆ ತರಗತಿಗಳು ಕೂಡ ಬೆಳಗ್ಗೆಯೇ ನಡೆಯಲಿದೆ. ಆದರೆ 8ನೆ ತರಗತಿಯು ಮಧ್ಯಾಹ್ನದ ಬಳಿಕ ತರಗತಿಗಳು ಆರಂಭವಾಗಿದೆ. ಕೆಲವು ಕಡೆ ಖಾಸಗಿ ಶಾಲೆಗಳಲ್ಲಿ 8ನೆ ತರಗತಿಯೂ ಬೆಳಗ್ಗೆ ನಡೆಸಲು ನಿರ್ಧರಿಸಲಾಗಿದೆ.

ದ.ಕ.ಜಿಲ್ಲೆಯಲ್ಲಿ ಶುಕ್ರವಾರದಿಂದಲೇ ಬಹುತೇಕ ಶಾಲೆಗಳಲ್ಲಿ 8,9,10ನೇ ತರಗತಿಗಳು ಆರಂಭವಾಗಿದೆ. ಕೆಲವು ಕಡೆ ಸೆ.20ರಿಂದ ಆರಂಭಗೊಳ್ಳಲಿದೆ. ಈಗಾಗಲೆ ಆರಂಭಗೊಂಡ ಶಾಲೆಗಳಲ್ಲಿ ಮೊದಲ ದಿನವೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೌತಿಕ ತರಗತಿಗೆ ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದರೆ. ಪದವಿ, ಪಿಯು, 8,9,10ನೆ ತರಗತಿಗಳು ಈಗಾಗಲೆ ಆರಂಭಗೊಂಡಿದ್ದರೆ, 6,7ನೆ ತರಗತಿಗಳು ಸೋಮವಾರದಿಂದ ಪ್ರಾರಂಭಗೊಳ್ಳಲಿದೆ.

ಪದವಿಯಲ್ಲಿ ವಿದ್ಯಾರ್ಥಿಗಳ ಭೌತಿಕ ತರಗತಿಗೆ ಶೇ.80ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರೆ, ಪ್ರಥಮ ಪಿಯುಗೆ 7,402 ಮತ್ತು ದ್ವಿತೀಯ ಪಿಯುಗೆ 13,178 ವಿದ್ಯಾರ್ಥಿಗಳ ಹಾಜರಾತಿ ಕಾಣಿಸಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News