ನಿರ್ಮಾಣ ಹೋಮ್ಸ್: ಅಜಂತಾ ಬ್ಯುಸಿನೆಸ್ ಸೆಂಟರ್ ನಲ್ಲಿ ಮಾದರಿ ಕಚೇರಿ ಉದ್ಘಾಟನೆ

Update: 2021-09-19 17:10 GMT

ಮಂಗಳೂರು: ಮಂಗಳೂರಿನ ಕಾಪಿಕಾಡಿನಲ್ಲಿ 'ನಿರ್ಮಾಣ ಹೋಮ್ಸ್' ಹಾಗೂ ಬಿ.ಆರ್. ಇನ್ಫ್ರಾ ಅವರ ಸಹಯೋಗದೊಂದಿಗೆ ನಿರ್ಮಾಣಗೊಳ್ಳಲಿರುವ ಮಂಗಳೂರಿನ ವಾಣಿಜ್ಯ ಕ್ಷೇತ್ರದ ಹಾಗೂ ರಿಯಲ್ ಎಸ್ಟೇಟ್‍ನಲ್ಲಿ ಹೊಸ ಆಶಾಕಿರಣವಾದ ಅಜಂತಾ ಬ್ಯುಸಿನೆಸ್ ಸೆಂಟರ್ ನ ಮಾದರಿ ಕಚೇರಿಯ ಉದ್ಘಾಟನೆಯನ್ನು ಲೆಕ್ಕಪರಿಶೋಧಕ ಶಾಂತಾರಾಮ ಶೆಟ್ಟಿ ನೆರವೇರಿಸಿದರು.

ನಿರ್ಮಾಣ ಹೋಮ್ಸ್ ಗುಣಮಟ್ಟದಲ್ಲಿ ತನ್ನ ಹೆಸರನ್ನು ಗಟ್ಟಿಯಾಗಿ ಉಳಿಸಿಕೊಂಡು ಬಂದಿದೆ. ಹೊಸ ಪರಿಕಲ್ಪನೆಗಳನ್ನು ಅಳವಡಿಸಿಕೊಂಡು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಜನರಿಗೆ ಹತ್ತಿರವಾಗಿದ್ದು, ಇದೀಗ ಮಂಗಳೂರು ನಗರದಲ್ಲಿ ಅಜಂತಾ ಬ್ಯುಸಿನೆಸ್ ಸೆಂಟರ್ ಮೂಲಕ ಮತ್ತಷ್ಟು ಹತ್ತಿರವಾಗುತ್ತಿದೆ ಎಂದು ಅವರು ನುಡಿದರು.

ಎಸ್‍ಬಿಐ ಬ್ಯಾಂಕ್‍ನ ಪ್ರಾದೇಶಿಕ ವ್ಯವಸ್ಥಾಪಕ ಹರಿಶಂಕರ್ ಎನ್. ಎಂ ಮಾತನಾಡಿ, ನಿರ್ಮಾಣ ಹೋಮ್ಸ್ ಹಾಗೂ ಎಸ್‍ಬಿಐ ಬ್ಯಾಂಕ್ ನಡುವೆ ಉತ್ತಮ ಬಾಂಧವ್ಯ ಇದ್ದು, ನಿರ್ಮಾಣ ಹೋಮ್ಸ್‍ನ ಯೋಜನೆಯಲ್ಲಿ ಮನೆ/ ಕಚೇರಿ ಖರೀದಿಸುವವರಿಗೆ ಅಥವಾ ಹೂಡಿಕೆ ಮಾಡುವ ಹೆಚ್ಚಿನ ಗ್ರಾಹಕರಿಗೆ ಎಸ್‍ಬಿಐ ಬ್ಯಾಂಕ್‍ನಿಂದ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ನಿರ್ಮಾಣ ಹೋಮ್ಸ್ ಈಗ ಮತ್ತೊಂದು ವಿನೂತನ ಯೋಜನೆಗೆ ಹೆಜ್ಜೆ ಇಡುತ್ತಿದ್ದು, ಇದರಲ್ಲಿಯೂ ಕೂಡ ಯಶಸ್ಸು ಗಳಿಸಲಿದೆ. ಮತ್ತಷ್ಟು ಹೊಸ ಹೊಸ ಯೋಜನೆಗಳು ಅನುಷ್ಠಾನಕ್ಕೆ ಬರುವಂತೆ ಆಗಲಿ ಎಂದು ಹೇಳಿದರು.

ಕಾರ್ಯದರ್ಶಿ ಚೇತನ್ ನಾಯಕ್, ನಿರ್ಮಾಣ ಹೋಮ್ಸ್ ಪರಿಚಯಿಸುತ್ತಿರುವ ಅಜಂತಾ ಬ್ಯುಸಿನೆಸ್ ಸೆಂಟರ್ ನೂತನ ಯೋಜನೆಯ ವಿನ್ಯಾಸ ಹಾಗೂ ವಾಸ್ತುಶಿಲ್ಪ ಆಕರ್ಷಕವಾಗಿದೆ, ಇತ್ತೀಚಿಗೆ ರಾಜ್ಯ ಸರ್ಕಾರ ಘೋಷಿಸಿದ "ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್" ಕಾರ್ಯಕ್ರಮ ಯೋಜನೆಯು ಸ್ಮಾರ್ಟ್ ಸಿಟಿ ಮಂಗಳೂರು ನಗರಕ್ಕೂ ವಿಸ್ತರಣೆ ಆಗುತ್ತಿದೆ. ಕೋವಿಡ್‍ನಿಂದಾಗಿ ಹಲವಾರು ಐಟಿ ಸಂಸ್ಥೆಗಳು ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಉದ್ದೇಶದಿಂದ ಮಂಗಳೂರಿಗೆ ಬರುವ ಯೋಜನೆ ರೂಪಿಸುತ್ತಿವೆ. ಅಗತ್ಯ ಸೌಲಭ್ಯಗಳನ್ನು ಹೊಂದಿರುವಂತಹ ಸ್ಥಳ ಹುಡುಕಾಟ ಮಾಡುವಂತ ಸಾಧ್ಯತೆ ಹೆಚ್ಚು. ಮಂಗಳೂರಿನ ಅಜಂತಾ ಬ್ಯುಸಿನೆಸ್ ಸೆಂಟರ್ ಇಂತಹ ಕಾರ್ಯಕ್ಷೇತ್ರಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ನಿರಂತರವಾಗಿ ಒದಗಿಸಿಕೊಡುವ ಕೆಲಸ ಮಾಡಲಿದೆ' ಎಂದು ಹೇಳಿದರು.

ಯೋಜನೆಯ ವ್ಯವಸ್ಥಾಪಕ ಗುರದತ್ ಶೆಣೈ ಮಾತನಾಡಿ, ಈ ಯೋಜನೆಯಲ್ಲಿ ಸಾಕಷ್ಟು ವಿಷಿಷ್ಟವಾದ ಸೌಲಭ್ಯಗಳು ಲಭ್ಯವಿದ್ದು, ಅಜಂತಾ ಬ್ಯುಸಿನೆಸ್ ಸೆಂಟರ್ ನಲ್ಲಿ ವಾಣಿಜ್ಯ ಕಚೇರಿಗಳನ್ನು ಖರೀದಿ ಮಾಡಲು ಹಲವು ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡಲು ಹಸಿರು ನಿಶಾನೆ ನೀಡಿವೆ. ಈ ಯೋಜನೆಯು ಮಾರ್ಚ್ 2022ರೊಳಗೆ ಪೂರ್ಣಗೊಳ್ಳಲಿದ್ದು, ಸ್ಪರ್ಧಾತ್ಮಕ ದರದಲ್ಲಿ ವಾಣಿಜ್ಯ ಕಚೇರಿಗಳನ್ನು ಖರೀದಿ ಮಾಡಬಹುದು ಎಂದು ಹೇಳಿದರು.  

ಬಿ.ಆರ್ ಇನ್ಫ್ರಾದ ಪ್ರಮೋಟರ್ಸ್ ಆದ ರಾಮ್‍ಮೋಹನ್ ಹೆಗ್ಡೆ ಸ್ವಾಗತಿಸಿದರು, ಭಾಸ್ಕರ್ ಗಡಿಯಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಯೋಜನಾ ವ್ಯವಸ್ಥಾಪಕರಾದ ಮಹೇಶ್ ಶೆಟ್ಟಿ, ಮಂಗಲ್‍ ದೀಪ್ ಉಪಸ್ಥಿತರಿದ್ದರು.

ಈ ಬ್ಯುಸಿನೆಸ್ ಸೆಂಟರ್ ನಲ್ಲಿರುವ ಪ್ರಮುಖ ವೈಶಿಷ್ಟ್ಯಗಳು

ಯಾವುದೇ ಉದ್ಯಮ ಸಭೆಗಳನ್ನು ನಡೆಸಲು  ಸುಸಜ್ಜಿತವಾದ  ಸಭಾಂಗಣವನ್ನು ಹೊಂದಿರುತ್ತದೆ. ಪರಿಚಯಾತ್ಮಕ ಸಭೆ, ಯೋಜನೆಗಳ ಪ್ರಸ್ತುತ ಪಡಿಸುವಿಕೆ ಅಥವಾ ಆಡಳಿತ ಮಂಡಳಿಯ ಸಭೆಯನ್ನೂ ಈ ಕೊಠಡಿಯಲ್ಲಿ ನಡೆಸಲು ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ.

ಸಂದರ್ಶಕರು ಬಂದಾಗ ಅವರ ಅಗತ್ಯವನ್ನು ಗಮನಿಸಿ ಅವರನ್ನು ನಿರ್ದಿಷ್ಟ ವಿಭಾಗಗಳಿಗೆ ಕರೆದೊಯ್ಯಲು ಸಂವಾದಾತ್ಮಕ ಹೆಲ್ಪ್ ಡೆಸ್ಕ್ ಗಳನ್ನು ವಿನ್ಯಾಸಗೊಳಿಸಲಾಗಿದೆ.

ಸಣ್ಣಪುಟ್ಟ ತರಬೇತಿಗಳು, ವಿಚಾರ ಸಂಕಿರಣಗಳನ್ನು ನಡೆಸಲು ತರಬೇತಿ ಮತ್ತು ಸತ್ಕಾರದ ಸಭಾಂಗಣವನ್ನು ರೂಪಿಸಲಾಗಿದೆ. ಇಲ್ಲಿ ಸಂಸ್ಥೆಯ ಉದ್ಯೋಗಿಗಳು ಕಳಿತು ವಿಚಾರ ವಿನಿಮಯ ಮಾಡಿಕೊಳ್ಳಬಹುದು.

ಮಂಗಳೂರಿನ ಬಿಜೈ- ಕಾಪಿಕಾಡ್ ಪ್ರದೇಶದಲ್ಲಿರುವ ಈ ವಾಣಿಜ್ಯ ಕ್ಷೇತ್ರ ನಗರದೊಳಗೆ ಕೆಲವೇ  ಕಿಲೋಮೀಟರ್ ಗಳ ಅಂತರದಲ್ಲಿದೆ. ಗ್ರಾಹಕರು ಅಥವಾ ಸಂದರ್ಶಕರು ಈ ಕಚೇರಿಗೆ ಸುಲಭವಾಗಿ ಭೇಟಿ ನೀಡಬಹುದು.

ಕಟ್ಟಡದ ತಳ ಅಂತಸ್ತಿನಲ್ಲಿ ಸುಮಾರು 70 ವಾಹನಗಳನ್ನು ನಿಲ್ಲಿಸಲು ಅವಕಾಶ ಇದೆ. ಈ ಬ್ಯುಸಿನೆಸ್ ಸೆಂಟರ್ ನ ಹೊರ ಭಾಗದಲ್ಲಿ ಉದ್ಯೋಗಿಗಳು ಮುಕ್ತವಾಗಿ ಮಾತನಾಡಲು, 'ಬ್ರೇಕ್ ಔಟ್ ಏರಿಯಾ'ದ ಸೌಲಭ್ಯವಿದೆ.

ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ನಗರದ ಕಾಪಿಕಾಡ್‍ನ ಸುಪ್ರಭಾತ ಬಿಲ್ಡಿಂಗ್‍ನ 2ನೇ ಮಹಡಿಯಲ್ಲಿರುವ ನಿರ್ಮಾಣ್ ಹೋಮ್ಸ್ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಅಥವಾ www.nirmaanhomes.com ಲಾಗ್ ಆನ್ ಆಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News