ರಶ್ಯ: ಪುಟಿನ್ ಪಕ್ಷಕ್ಕೆ ಬಹುಮತದ ನಿರೀಕ್ಷೆ‌

Update: 2021-09-19 17:18 GMT

ಮಾಸ್ಕೋ, ಸೆ.19: ವಿಪಕ್ಷಗಳ ಮುಖಂಡರ ವ್ಯಾಪಕ ಬಂಧನ, ನಕಲಿ ಮತದಾನದ ಆರೋಪಗಳ ನಡುವೆಯೂ ರವಿವಾರ ಮುಕ್ತಾಯಗೊಂಡ ರಶ್ಯ ಸಂಸದೀಯ ಚುನಾವಣೆಯಲ್ಲಿ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಪಕ್ಷ ಮತ್ತೆ ಬಹುಮತ ಗಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ವಿಪಕ್ಷ ಮುಖಂಡರ ಮೇಲೆ ನಿರ್ಬಂಧ ವಿಧಿಸಿದ್ದ ಸರಕಾರ ಪ್ರಮುಖ ವಿಪಕ್ಷ ಮುಖಂಡ ಅಲೆಕ್ಸಿ ನವಾಲ್ನಿಯನ್ನು ಬಂಧನದಲ್ಲಿರಿಸಿತ್ತು. ಇದು ಚುನಾವಣೆಯೇ ಅಲ್ಲ. ಯಾಕೆಂದರೆ ಜನತೆಗೆ ಬೇರೆ ಆಯ್ಕೆಯೇ ಇರಲಿಲ್ಲ ಎಂದು ಸೈಂಟ್ ಪೀಟರ್ಸ್ಬರ್ಗ್ ನ ಉದ್ಯಮಿ ವ್ಲಾದಿಮಿರ್ ಝಕರೋವ್ ಪ್ರತಿಕ್ರಿಯಿಸಿದ್ದಾರೆ.

 ರಶ್ಯದಲ್ಲಿ ಸಂಸದೀಯ ಚುನಾವಣೆಗಾಗಿ 3 ದಿನಗಳ ಮತದಾನ ಶುಕ್ರವಾರ ಆರಂಭವಾಗುತ್ತಿದ್ದಂತೆಯೇ, ಬಂಧನದಲ್ಲಿರುವ ವಿಪಕ್ಷ ಮುಖಂಡ ಅಲೆಕ್ಸಿ ನವಾಲ್ನಿಯ ಮಿತ್ರರು ಚುನಾವಣೆ ಪ್ರಕ್ರಿಯೆ ಸಂಬಂಧ ರೂಪಿಸಿದ್ದ, ಪುಟಿನ್ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸುವ ಉದ್ದೇಶದಿಂದ ಎದುರಾಳಿ ಅಭ್ಯರ್ಥಿಗಳ ಬಗ್ಗೆ ಪ್ರಚಾರ ಮಾಡುವ ಆ್ಯಪ್ ಅನ್ನು ಆ್ಯಪಲ್ ಮತ್ತು ಗೂಗಲ್ ಸ್ಟೋರ್ಸ್ನಿಂದ ತೆಗೆದು ಹಾಕಿದ್ದರು. ಬಳಿಕ ಟೆಲಿಗ್ರಾಂ ಸಾಮಾಜಿಕ ಮಾಧ್ಯಮ ವೇದಿಕೆ ಕೂಡಾ ಇದೇ ಕ್ರಮ ಕೈಗೊಂಡಿತ್ತು.

ರಶ್ಯದ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ರೋಸ್ಕೋಮ್ನರೆರ್ನ ಒತ್ತಡದಿಂದ ಗೂಗಲ್ ಹಾಗೂ ಇತರ ವೇದಿಕೆ ಈ ಕ್ರಮ ಕೈಗೊಂಡಿದೆ ಎಂದು ನವಾಲ್ನಿಯ ತಂಡ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News