'ಮಹಿಳೆಯರ ಸುರಕ್ಷತೆ ದೇಶದ ಹೊಣೆ' ವೆಲ್ಫೇರ್ ಪಾರ್ಟಿ ರಾಜ್ಯವ್ಯಾಪಿ ಅಭಿಯಾನ; ವಿಚಾರ ವಿನಿಮಯ ಕಾರ್ಯಕ್ರಮ

Update: 2021-09-19 17:34 GMT

ವಿಟ್ಲ : ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಮಹಿಳಾ ವಿಭಾಗದಿಂದ "ಮಹಿಳೆಯರ ಸುರಕ್ಷತೆ ದೇಶದ ಹೊಣೆ" ಎಂಬ ಧ್ಯೇಯದಡಿಯಲ್ಲಿ ಮಹಿಳಾ  ಸುರಕ್ಷತಾ ಜಾಗೃತಿ ಅಭಿಯಾನವನ್ನು ಸೆ. 12 ರಿಂದ ಸೆ.19ರವರೆಗೆ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ವಿಟ್ಲದ ಅನುಗ್ರಹ ವಾಣಿಜ್ಯ ಸಂಕೀರ್ಣದಲ್ಲಿರುವ ಮಿನಿ ಸಭಾಭವನದಲ್ಲಿ ವಿಚಾರ ವಿನಿಮಯ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದಲ್ಲಿ ಪಕ್ಷದ ದ.ಕ. ಜಿಲ್ಲಾ ಮಹಿಳಾ ಸಮಿತಿಯ ಅಧ್ಯಕ್ಷೆ ಮಮ್ತಾಝ್ ವಾಮಂಜೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾಮಣಿ ರೈ ವಕೀಲೆಯರು ಬಂಟ್ವಾಳ, ಶಾರದಾ, ಶಿಶು ಅಭವೃದ್ಧಿ ಯೋಜನೆ ವಿಟ್ಲ ಇದರ ಹಿರಿಯ ಮೇಲ್ವಿಚಾರಕಿ ಮತ್ತು ರೇವತಿಯಮ್ಮ ನಿವೃತ್ತ ಶಿಕ್ಷಕಿ ನೀರ್ಕಜೆ ವಿಟ್ಲ ತಮ್ಮ ವಿಚಾರವನ್ನು ಮಂಡಿಸಿ ಮಹಿಳಾ ಜಾಗೃತಿ ಸಂದೇಶವನ್ನು ನೀಡಿದರು.

ಪಕ್ಷದ ದ. ಕ. ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ಮರಿಯಂ ಶಹೀರ ಮಾತನಾಡಿ ಮಹಿಳಾ ಸುರಕ್ಷತೆಯ ಬಗ್ಗೆ ತಮ್ಮ ಪಕ್ಷವು ಆಡಳಿತ ವರ್ಗಕ್ಕೆ ತಮ್ಮ ಹೊಣೆಗಾರಿಕೆಯನ್ನು ನೆನಪಿಸುವ ಕೆಲಸವನ್ನು ಮಾಡುತ್ತಿದೆಯೆಂದರು. ರಾಜ್ಯ ಸಮಿತಿಯ ಉಪಾಧ್ಯಕ್ಷ ಶ್ರೀಕಾಂತ್  ಸಾಲ್ಯಾನ್ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸ್ಥಾಪನೆಯ ಉದ್ದೇಶ ಮತ್ತು ಅದರ ಧ್ಯೇಯ ಧೋರಣೆಗಳನ್ನು ವಿವರಿಸಿದರು.

ಪಕ್ಷದ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಅಡ್ವಕೇಟ್ ಸರ್ಫರಾಝ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಮಾಧ್ಯಮ ವಕ್ತಾರ ಅಬ್ದುಲ್ ಖಾದರ್ ಕುಕ್ಕಾಜೆ ಸ್ವಾಗತಿಸಿದರು. ಪಕ್ಷದ ಮಹಿಳಾ ವಿಭಾಗದ ವಿಟ್ಲ ವರ್ತುಲದ ಸಂಯೋಜಕಿ ಆಶುರಾ ವಂದಿಸಿದರು. ಸಭೆಯಲ್ಲಿ ಅಭಿಯಾನ ಸಂಚಾಲಕಿ ಝೀನತ್ ಇಸ್ಮಾಯಿಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News