ಆಫ್ರಿಕಾದ ಖದೀಜಾ ಪಟೇಲ್ ಇಂಟರ್ ನ್ಯಾಷನಲ್ ಪ್ರೆಸ್ ಇನ್‍ಸ್ಟಿಟ್ಯೂಟ್‍ನ ಕಾರ್ಯಕಾರಿ ಮಂಡಳಿ ಅಧ್ಯಕ್ಷೆಯಾಗಿ ಆಯ್ಕೆ

Update: 2021-09-20 09:16 GMT
Photo: ipi.media

ಹೊಸದಿಲ್ಲಿ: ದಕ್ಷಿಣ ಆಫ್ರಿಕಾದ ಖದೀಜಾ ಪಟೇಲ್ ಅವರು ಇಂಟರ್‍ನ್ಯಾಷನಲ್ ಪ್ರೆಸ್ ಇನ್‍ಸ್ಟಿಟ್ಯೂಟ್‍ನ ಜಾಗತಿಕ ಕಾರ್ಯಕಾರಿ ಮಂಡಳಿಯ 35ನೇ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಪ್ರಸಕ್ತ ಇಂಟರ್‍ನ್ಯಾಷನಲ್ ಫಂಡ್ ಫಾರ್ ಪಬ್ಲಿಕ್ ಇಂಟರೆಸ್ಟ್ ಮೀಡಿಯಾ ಇದರ ಕಾರ್ಯಕ್ರಮಗಳ ಮುಖ್ಯಸ್ಥೆಯಾಗಿ ಅವರು ಸೇವೆ ಸ್ಲಲ್ಲಿಸುತ್ತಿದ್ದಾರೆ. ಖದೀಜಾ ಅವರು ದಕ್ಷಿಣ ಆಫ್ರಿಕಾದ ಮೇಲ್ ಮತ್ತು ಗಾರ್ಡಿಯನ್ ಪತ್ರಿಕೆಗಳ ಮುಖ್ಯ ಸಂಪಾದಕಿಯಾಗಿಯೂ ಈ ಹಿಂದೆ ಸೇವೆ ಸಲ್ಲಿಸಿದ್ದಾರೆ.

ಇಂಟರ್‍ನ್ಯಾಷನಲ್ ಪ್ರೆಸ್ ಇನ್‍ಸ್ಟಿಟ್ಯೂಟ್‍ನ  ಕಾರ್ಯಕಾರಿ ಮಂಡಳಿಯ ಸಹ ಸದಸ್ಯರು ಸೆಪ್ಟೆಂಬರ್ 15ರಿಂದ 17ರ ತನಕ  ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ನಡೆದ ಜಾಗತಿಕ ಶೃಂಗಸಭೆಯಲ್ಲಿ ಈ ಪ್ರತಿಷ್ಠಿತ ಹುದ್ದೆಗೆ ಖದೀಜಾ ಅವರನ್ನು ಆಯ್ಕೆ ಮಾಡಿದ್ದಾರೆ.

ಖದೀಜಾ ಅವರು ಈ ಹಿಂದೆ ಈ ಹುದ್ದೆಯನ್ನು ಹೊಂದಿದ್ದ ಸ್ವಿಝರ್‌ ಲ್ಯಾಂಡ್‍ನ ನ್ಯೂ ಝುರ್ಚರ್ ಝೀಟುಂಗ್ ಅವರ ಸ್ಥಾನವನ್ನು  ಅಲಂಕರಿಸಲಿದ್ದಾರೆ.

"ನನಗೆ ಈ ಹುದ್ದೆ ದೊರಕಿರುವುದರಿಂದ ಖುಷಿಯಾಗಿದೆ. ಪತ್ರಿಕೋದ್ಯಮ ಕ್ಷೇತ್ರ ಹಲವು ಸವಾಲುಗಳನ್ನು ಎದುರಿಸುತ್ತಿರುವ ಪ್ರಸಕ್ತ ಸಮಯದಲ್ಲಿ ಇಂಟರ್‍ನ್ಯಾಷನಲ್ ಪ್ರೆಸ್ ಇನ್‍ಸ್ಟಿಟ್ಯೂಟ್ ಅನ್ನು ಮುನ್ನಡೆಸುವ ಜವಾಬ್ದಾರಿಯನ್ನು ನಿಭಾಯಿಸಲು ಎದುರು ನೋಡುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ

 ಮಂಡಳಿಗೆ 10 ದೇಶಗಳ ಪ್ರಮುಖ ಪತ್ರಿಕೆಗಳ ಸಂಪಾದಕರನ್ನು ಕಾರ್ಯಕಾರಿ ಮಂಡಳಿ ಸದಸ್ಯರನ್ನಾಗಿ ಆರಿಸಲಾಗಿದೆ.

ಭಾರತದ ಮಲಯಾಳ ಮನೋರಮ ಮತ್ತು ದಿ ವೀಕ್ ಪತ್ರಿಕೆಗಳ ಸಂಪಾದಕ ರಿಯಾದ್ ಮ್ಯಾಥ್ಯೂ ಅವರು ಮರು ಆಯ್ಕೆಗೊಂಡ ಮಂಡಳಿಯ ಕಾರ್ಯಕಾರಿ ಸದಸ್ಯರನ್ನು ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News