ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದ.ಕ. ಜಿಲ್ಲೆಯಲ್ಲಿ ಶೇ. 49.48 ವಿದ್ಯಾರ್ಥಿಗಳು ಉತ್ತೀರ್ಣ

Update: 2021-09-20 11:49 GMT

ಮಂಗಳೂರು, ಸೆ. 20: ಶಿಕ್ಷಣ ಇಲಾಖೆ ಪ್ರಕಟಿಸಿದ್ದ ದ್ವಿತೀಯ ಪಿಯು ಫಲಿತಾಂಶವನ್ನು ತಿರಸ್ಕರಿಸಿ ಹೊಸದಾಗಿ ಭೌತಿಕ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಫಲಿತಾಂಶ ಸೋಮವಾರ ಪ್ರಕಟವಾಗಿದೆ.

ದ.ಕ. ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ 1067 ಮಂದಿ ವಿದ್ಯಾರ್ಥಿಗಳಲ್ಲಿ 528 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 49.48 ಫಲಿತಾಂಶ ದಾಖಲಾಗಿದೆ.

ಒಟ್ಟು 1032 ಖಾಸಗಿ ವಿದ್ಯಾರ್ಥಿಗಳು, 3 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 32 ಮಂದಿ ಇಲಾಖಾ ಫಲಿತಾಂಶ ತಿರಸ್ಕರಿಸಿ ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 494 ಖಾಸಗಿ, ಎಲ್ಲ ಮೂವರು ಪುನರಾವರ್ತಿತರು ಹಾಗೂ 31 ಮಂದಿ ಫಲಿತಾಂಶ ತಿರಸ್ಕರಿಸಿದವರು ಉತ್ತೀರ್ಣರಾಗಿದ್ದಾರೆ.

ವಿಭಾಗವಾರು ಫಲಿತಾಂಶ

ಕಲಾವಿಭಾಗದಲ್ಲಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 314 ವಿದ್ಯಾರ್ಥಿಗಳಲ್ಲಿ 152 ಮಂದಿ ಉತ್ತೀರ್ಣರಾಗಿ ಶೇ.48.41 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 748 ವಿದ್ಯಾರ್ಥಿಗಳಲ್ಲಿ 372 ಉತ್ತೀರ್ಣರಾಗಿದ್ದು ಶೇ.49.73 ಹಾಗೂ ವಿಜ್ಞಾನ ವಿಭಾಗದಲ್ಲಿ 5 ಮಂದಿ ಯಲ್ಲಿ 4 ಮಂದಿ ಉತ್ತೀರ್ಣರಾಗಿ ಶೇ.80 ಫಲಿತಾಂಶ ದಾಖಲಾಗಿದೆ. ಉತ್ತೀರ್ಣರಾದವರ ಪೈಕಿ 281 ಹುಡುಗಿಯರು ಹಾಗೂ 247 ಹುಡುಗರು ಸೇರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News