ಮಂಗಳೂರು: ಲಿವಾ ಟೂರ್ಸ್ ಆ್ಯಂಡ್ ಟ್ರಾವೆಲ್ಸ್‌ನ 2ನೆ ಶಾಖೆ ಶುಭಾರಂಭ
Update: 2021-09-20 17:45 IST
ಮಂಗಳೂರು, ಸೆ.20: ಲಿವಾ ಟೂರ್ಸ್ ಆ್ಯಂಡ್ ಟ್ರಾವೆಲ್ಸ್‌ನ 2ನೆ ಶಾಖೆ ನಗರದ ಕಂಕನಾಡಿ ಬಳಿ (ಸುಲ್ತಾನ್ ಗೋಲ್ಡ್ ಎದುರು) ಇಂದು ಶುಭಾರಂಭಗೊಂಡಿತು.
ಕೆ.ಎಸ್. ಆಟಕೋಯ ತಂಙಳ್, ಕುಂಬೋಳ್ ಉದ್ಘಾಟನೆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಬ್ಯಾರೀಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಕೆ.ಎಂ. ಅಬ್ದುಲ್ ರಹ್ಮಾನ್, ವಿಶ್ವಾಸ್ ಬಿಲ್ಡರ್ಸ್‌ನ ಅಬ್ದುಲ್ ರವೂಫ್ ಪುತ್ತಿಗೆ, ಸಯ್ಯದ್ ಅಲವಿ ಅಲ್ ಬುಖಾರಿ ಮದನಿ ಉಪಸ್ಥಿತರಿದ್ದು, ಶುಭ ಹಾರೈಸಿದರು.
ಸಂಸ್ಥೆಯಲ್ಲಿ ಮಾಲಕರಾದ ಎನ್. ಮೊಹಿದ್ದಿನ್ ನಾವುಂದ ಉಪಸ್ಥಿತರಿದ್ದು, ಉತ್ತಮ ದರದಲ್ಲಿ ಅತ್ಯುತ್ತಮ ಸೇವೆಯನ್ನು ಗ್ರಾಹಕರಿಗೆ ನೀಡುವುದಾಗಿ ಉದ್ಘಾಟನಾ ಸಮಾರಂಭದಲ್ಲಿ ಭರವಸೆ ನೀಡಿದರು.