ಕಲ್ಲರಕೋಡಿ : ಸರಕಾರಿ ಶಾಲೆ ಪ್ರಾರಂಭೋತ್ಸವ
Update: 2021-09-20 17:56 IST
ಕಲ್ಲರಕೋಡಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಲ್ಲರಕೋಡಿ, ಇದರ ಪ್ರಾರಂಭೋತ್ಸವವು ಕೋವಿಡ್ ಮಾನದಂಡಗಳನ್ನು ಅಸನುಸರಿಸಿ ನಡೆಯಿತು.
ಶಾಲಾ ಶಿಕ್ಷಕ ವೃಂದ ತಳಿರು ತೋರಣ, ಹೂವು, ಬಲೂನ್ ಕಟ್ಟಿ ಶಾಲೆಯನ್ನು ಅಲಂಕರಿಸಿದರು. ಶಾಲಾ ಪ್ರಾರಂಭೋತ್ಸವವು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷರಾದ ಭಾರತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನರಿಂಗಾನ ಗ್ರಾಪಂ ಉಪಾಧ್ಯಕ್ಷ ನವಾಝ್ ಎಂ.ಬಿ. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು. ಶಾಲೆಗೆ ಬಂದ ಎಲ್ಲಾ ವಿದ್ಯಾರ್ಥಿಗಳಿಗೆ ಪೆನ್ನು ನೀಡುವ ಮೂಲಕ ಸ್ವಾಗತಿಸಲಾಯಿತು.
ಈ ಸಂದರ್ಭ ಮತ್ತು ಎಸ್ಡಿಎಂಸಿ ಸದಸ್ಯರು ಹಾಗು ಇತರರು ಉಪಸ್ಥಿತರಿದ್ದರು. ಸಹ ಶಿಕ್ಷಕರಾದ ವಸಂತ ರೈ ಬಿ.ಕೆ ಕಾರ್ಯಕ್ರಮ ನಿರೂಪಿಸಿ, ಸಹ ಶಿಕ್ಷಕರಾದ ರಘು ಕೆ.ಎಚ್ ವಂದಿಸಿದರು.