×
Ad

ಸಿಇಟಿಯಲ್ಲಿ ವಿದ್ಯೋದಯ ಸಂಸ್ಥೆ ಸಾಧನೆ

Update: 2021-09-20 20:30 IST

ಉಡುಪಿ, ಸೆ.20: ಉಡುಪಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇಂದು ಪ್ರಕಟಗೊಂಡ ಸಿಇಟಿ- 2021ರ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಇಂಜಿನಿಯರಿಂಗ್‌ನಲ್ಲಿ ಅಭಿಷೇಕ್ 494, ಪ್ರಣಮ್ ಪಿ. ಶೆಟ್ಟಿ 517, ಭಾರ್ಗವಿ ಬೋರ್ಕರ್ 623, ಧವನ್ ಎಂ. 732, ಮತ್ತು ಕೆ. ಆರ್. ಪಾರ್ಥಸಾರಥಿ ಹೆಬ್ಬಾರ್ 828ನೇ ರ್ಯಾಂಕ್ ಗಳಿಸಿದ್ದಾರೆ. ಅಗ್ರಿಕಲ್ಚರಲ್ ಬಿಎಸ್ಸಿಯಲ್ಲಿ ಭಾರ್ಗವಿ ಬೋರ್ಕರ್ 115, ಧವನ್ ಎಂ. 379, ವೈಷ್ಣವಿ 544, ಕೆ. ಆರ್. ಪಾರ್ಥಸಾರಥಿ ಹೆಬ್ಬಾರ್ 545, ಸಾಕ್ಷಿ 547ನೇ ರ್ಯಾಂಕ್ ಗಳಿಸಿದ್ದಾರೆ.

ಬಿ.ಫಾರ್ಮಾ ವಿಭಾಗದಲ್ಲಿ ಭಾರ್ಗವಿ ಬೋರ್ಕರ್ 327, ಸಾಕ್ಷಿ 992ನೇ ರ್ಯಾಂಕ್ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News