ಯುಎಇ ಕುರಿತ ಯುರೋಪಿಯನ್‌ ಯೂನಿಯನ್ ನಿರ್ಣಯ ತಿರಸ್ಕರಿಸಿದ ಬಹ್ರೇನ್‌

Update: 2021-09-20 16:18 GMT

 ಮನಾಮ, ಸೆ.20: ಯುಎಇಯ ಮಾನವ ಹಕ್ಕು ದಾಖಲೆಯ ಕುರಿತು ಯುರೋಪಿಯನ್ ಯೂನಿಯನ್(ಇಯು) ಅಂಗೀಕರಿಸಿರುವ ನಿರ್ಣಯ ವಾಸ್ತವಿಕವಾಗಿ ತಪ್ಪು ಮಾಹಿತಿಯಿಂದ ಕೂಡಿರುವುದರಿಂದ ಅದನ್ನು ತಿರಸ್ಕರಿಸುವುದಾಗಿ ಬಹ್ರೇನ್ ನ ವಿದೇಶ ವ್ಯವಹಾರ ಸಚಿವಾಲಯದ ಹೇಳಿಕೆ ತಿಳಿಸಿದೆ.

 ಯುಎಇಯು ಮಾನವ ಅಭಿವೃದ್ಧಿ, ಮಾನವ ಹಕ್ಕುಗಳ ರಕ್ಷಣೆ, ನ್ಯಾಯ ಮತ್ತು ಸಮಾನತೆಯ ಸಿದ್ಧಾಂತದ ಪಾಲನೆ ಮತ್ತು ತನ್ನ ಸಂವಿಧಾನ ಹಾಗೂ ಕಾನೂನಿಗೆ ಅನುಗುಣವಾಗಿ ಪ್ರಜೆಗಳು ಮತ್ತು ನಿವಾಸಿಗಳಿಗೆ ಯೋಗ್ಯ ಜೀವನ ವ್ಯವಸ್ಥೆಯನ್ನು ಕಡೆಗಣಿಸಿರುವ ಈ ನಿರ್ಣಯದಲ್ಲಿ ವಿಶ್ವಾಸಾರ್ಹತೆಯ ಕೊರತೆಯಿದೆ. ನ್ಯಾಯ, ಸಮಾನತೆ ಮತ್ತು ಮಾನವ ಹಕ್ಕುಗಳ ರಕ್ಷಣೆಯಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ(ಯುಎನ್ಡಿಪಿ) ಸಹಿತ ಜಾಗತಿಕ ಮಟ್ಟದ ಸಂಸ್ಥೆಯ ಶ್ರೇಯಾಂಕ ಪಟ್ಟಿಯಲ್ಲಿ ಯುಎಇಗೆ ಉನ್ನತ ಶ್ರೇಯಾಂಕ ಲಭಿಸಿದೆ ಎಂದು ಬಹ್ರೇನ್ ವಿದೇಶ ವ್ಯವಹಾರ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News