ಸಮಸ್ತ ಪರಿಷ್ಕೃತ ಉರ್ದು ಪಠ್ಯಪುಸ್ತಕ ಚೈತನ್ಯ ತರಬೇತಿ: ಶಿಕ್ಷಕ-ರಕ್ಷಕ ಸಮಾವೇಶ

Update: 2021-09-20 17:31 GMT

ಪುತ್ತೂರು: ಪ್ರತಿಷ್ಠಿತ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಪರಿಷ್ಕರಿಸಿದ ಉರ್ದು ಹನಫೀ ಸಿಲಬಸ್ ಮದರಸ ಪಠ್ಯಪುಸ್ತಕಗಳ ಚೈತನ್ಯ ತರಬೇತಿ ಮಸ್ಜಿದುಲ್ ಖಿಳ್ರ್  ಹನಫೀ  ಜುಮಾ ಮಸ್ಜಿದ್ ಸಿರಾಜುಲ್ ಹುದಾ ಉರ್ದು ಮದರಸ ಅಂಕತ್ತಡ್ಕದಲ್ಲಿ ಸಮಸ್ತ ಮುಫತ್ತಿಶ್  ಉಮರ್ ದಾರಿಮಿ ಸಾಲ್ಮರ  ರವರ ನೇತೃತ್ವದಲ್ಲಿ ನಡೆಯಿತು. 

ಹನಫೀ  ಇಮಾಮರ ಮಹತ್ವ,  ಉರ್ದು ಪಠ್ಯಕ್ರಮ,  ಗುಣಮಟ್ಟದ ಶಿಕ್ಷಣದ ಮಾರ್ಗಸೂಚಿಗಳು ಹಾಗೂ ಪೋಷಕರ ಜವಾಬ್ದಾರಿಯ ಬಗ್ಗೆ ವಿಷಯಾಧಾರಿತವಾಗಿ ಅವರು ಮುಖ್ಯ ಪ್ರಭಾಷಣಗೈದರು. ದ. ಕ ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್  ಅಧ್ಯಕ್ಷರಾದ ಶಂಸುದ್ದೀನ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕುಂಬ್ರ ರೇಂಜ್  ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಹಿರಾ  ಅಬ್ದುಲ್ ಖಾದರ್ ಹಾಜಿ  ಸಮಸ್ತದ  ಸಾಧನೆಗಳ ಬಗ್ಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಉರ್ದು ಮದರಸಾ ವಿದ್ಯಾರ್ಥಿಗಳಿಗೆ ಸಮಸ್ತದ ಪರಿಷ್ಕೃತ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ನಂತರ ಶಿಕ್ಷಕ-ರಕ್ಷಕ ಸಮಾವೇಶ ಹಾಗೂ ಶೈಕ್ಷಣಿಕ ಚರ್ಚಾಗೋಷ್ಠಿ ನಡೆಸಲಾಯಿತು.

ಜಮಾಅತ್ ಅಧ್ಯಕ್ಷರಾದ ಸಯ್ಯಿದ್ ಆರಿಫ್ ಅಂಕತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಅಧ್ಯಾಪಕರಾದ  ಮೌಲಾನಾ ಹಝ್ರತ್ ಸಾದಿಕುಲ್ಲಾ  ಪ್ರಾರ್ಥಿಸಿದರು. ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News