×
Ad

ಭಯೋತ್ಪಾದಕ ಕೃತ್ಯ: ಹಾಲಿವುಡ್ ಸಿನಿಮಾ ನಟನ ಅಪರಾಧ ಸಾಬೀತು; ರ್ವಾಂಡ ಕೋರ್ಟ್ ಘೋಷಣೆ

Update: 2021-09-20 23:09 IST

ಕಿಗಾಲಿ, ಸೆ.20: ಹಾಲಿವುಡ್ ಸಿನೆಮ ‘ಹೋಟೆಲ್ ರ್ವಾಂಡ’ದ ನಾಯಕನಟನಾಗಿದ್ದ ವೆಸೆಸ್ಎಬಾಜಿನ ವಿರುದ್ಧದ ಭಯೋತ್ಪಾದನೆ ಸಂಬಂಧಿತ ಆರೋಪ ಸಾಬೀತಾಗಿದೆ ಎಂದು ್ವಾಂಡ ದೇಶದ ನ್ಯಾಯಾಲಯ ಘೋಷಿಸಿದೆ.

ವೆಸೆಸ್ಎಬಾಜಿನ(67 ವರ್ಷ) ಅವರು ಎಂಆರ್ಸಿಡಿ-ಎಫ್ಎಲ್ಎನ್ ಎಂಬ ಭಯೋತ್ಪಾದಕ ಸಂಘಟನೆಯೊಂದರ ಭಾಗವಾಗಿರುವ ಅಪರಾಧ ಸಾಬೀತಾಗಿದೆ. ಅವರು ಮನೆಗೆ ನುಗ್ಗಿ ಜನರ ಮೇಲೆ ಅಥವಾ ವಾಹನದಲ್ಲಿ ಪ್ರಯಾಣಿಸುತ್ತಿದ್ದವರ ಮೇಲೆ ದಾಳಿ ನಡೆಸುತ್ತಿದ್ದರು ಎಂದು ತೀರ್ಪು ಘೋಷಿಸಿದ ನ್ಯಾಯಾಧೀಶರು ಹೇಳಿದ್ದಾರೆ.

ಇದನ್ನು ನಿರಾಕರಿಸಿರುವ ವೆಸೆಸ್ಎಬಾಜಿನ, ತನ್ನನ್ನು ಅಪಹರಿಸಿಕೊಂಡು ಬಂದು ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಹೇಳಿದ್ದಾರೆ. ದೇಶಭ್ರಷ್ಟ ಜೀವನ ನಡೆಸುತ್ತಿದ್ದ ವೆಸೆಸ್ಎಬಾಜಿನ ದೇಶದ ಅಧ್ಯಕ್ಷ ಪಾಲ್ ಕಗಾಮೆ ವಿರುದ್ಧ ವ್ಯಾಪಕ ಟೀಕೆ ನಡೆಸಿ ಆಡಳಿತದ ಕೆಂಗಣ್ಣಿಗೆ ಗುರಿಯಾಗಿದ್ದರು. 1994ರಲ್ಲಿ ಬಿಡುಗಡೆಯಾದ, ಜನಾಂಗೀಯ ಹತ್ಯೆಗೆ ಸಂಬಂಧಿಸಿದ ಹಾಲಿವುಡ್ ಸಿನೆಮ ‘ಹೋಟೆಲ್ ರ್ವಾಂಡ’ದಲ್ಲಿ ವೆಸೆಸ್ಎಬಾಜಿನ ಪ್ರಮುಖ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News