ರೈತ ನಾಯಕ ರಾಕೇಶ್ ಟಿಕಾಯತ್ ಅವರನ್ನು ʼಡಕಾಯಿತ' ಎಂದ ಉತ್ತರಪ್ರದೇಶ ಬಿಜೆಪಿ ಸಂಸದ
Update: 2021-09-21 18:31 IST
ಹೊಸದಿಲ್ಲಿ: ಕೇಂದ್ರದ ಕೃಷಿ ಕಾಯಿದೆಗಳ ವಿರುದ್ಧ ರೈತರು ಕಳೆದ ಹಲವಾರು ತಿಂಗಳುಗಳಿಂದ ನಡೆಸುತ್ತಿರುವ ಪ್ರತಿಭಟನೆಗಳ ನೇತೃತ್ವ ವಹಿಸಿರುವ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಅವರನ್ನು ʼಡಕಾಯಿತ' ಎಂದು ಉತ್ತರ ಪ್ರದೇಶದ ಬಹ್ರೈಚ್ ಕ್ಷೇತ್ರದ ಬಿಜೆಪಿ ಸಂಸದ ಅಕ್ಷಯವರ್ ಲಾಲ್ ಗೊಂಡ್ ಬಣ್ಣಿಸಿದ್ದಾರೆ.
ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ನಾಲ್ಕೂವರೆ ವರ್ಷ ಆಡಳಿತ ಪೂರೈಸಿದ ಸಂದರ್ಭ ಕಳೆದ ರವಿವಾರ ಸುದ್ದಿಗಾರರ ಜತೆ ಮಾತನಾಡುತ್ತಾ ಅವರು ಮೇಲಿನಂತೆ ಹೇಳಿದ್ದಾರೆ.
ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುವವರು ರೈತರಲ್ಲ, ಬದಲು `ಸಿಖಿಸ್ತಾನದ ಮತ್ತು ಪಾಕಿಸ್ತಾನ್'ನಿಂದ ಪ್ರೇರಿತರಾದ ರಾಜಕೀಯ ಪಕ್ಷಗಳ ಜನರು ಎಂದೂ ಅವರು ಹೇಳಿದ್ದಾರೆ.
"ಕೆನಡಾ ಮತ್ತಿತರ ವಿದೇಶಗಳಿಂದ ರೈತರ ಪ್ರತಿಭಟನೆಗಳಿಗೆ ಹಣ ಬರುತ್ತಿದೆ. ಇದು ಉಗ್ರವಾದಕ್ಕಾಗಿ ನೀಡಲಾದ ಹಣ, ಏಜನ್ಸಿಗಳು ಅದರ ಬಗ್ಗೆ ತನಿಖೆ ನಡೆಸುತ್ತಿದೆ" ಎಂದೂ ಅವರು ಹೇಳಿಕೊಂಡಿದ್ದಾರೆ.