​ಸೆ.25: ಮಂಗಳೂರು 'ಚುಸಾಪ'ದಿಂದ ತುಳು ಉಪನ್ಯಾಸ, ಕವಿಗೋಷ್ಠಿ

Update: 2021-09-22 10:54 GMT

ಮಂಗಳೂರು, ಸೆ.22: ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ 5ನೇ ಉಪನ್ಯಾಸ ಕಾರ್ಯಕ್ರಮ ಹಾಗೂ ಶಿಕ್ಷಕರ ಕವಿಗೋಷ್ಠಿಯು ಸೆ.25ರಂದು ರಾತ್ರಿ 7 ಗಂಟೆಗೆ ಗೂಗಲ್ ಮೀಟ್ ವೆಬಿನಾರ್ ಮೂಲಕ ಆಯೋಜಿಸಿದೆ.
ಎಂಆರ್‌ಪಿಎಲ್ ಪ್ರಶಿಕ್ಷಣ ವಿಭಾಗದ ಉಪ ಮಹಾಪ್ರಬಂಧಕಿ ವೀಣಾ ಟಿ.ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ 'ತುಳುವ ಮಣ್ಣ್‌ದ ಕಮ್ಮೆನ’ ಎಂಬ ವಿಷಯದ ಕುರಿತು ತುಳು ಭಾಷೆಯಲ್ಲಿ ಉಪನ್ಯಾಸ ನೀಡಲಿದ್ದಾರೆ. ಶಿಕ್ಷಕರ ದಿನಾಚರಣೆ ನಿಮಿತ್ತ ’ಕಲಿಸುವ ಮನಸಿನ ಕವಿತೆ’ ಎಂಬ ಶಿಕ್ಷಕರ ಕನ್ನಡ ಕವಿಗೋಷ್ಟಿಯನ್ನು ಏರ್ಪಡಿಸಲಾಗಿದೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ಮಂಗಳೂರು ವಿಶ್ವ ವಿದ್ಯಾನಿಲಯದ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಡಾ.ಮಾಧವ ಎಂ.ಕೆ. ಅಧ್ಯಕ್ಷತೆ ವಹಿಸುವರು. ಸಾಹಿತ್ಯ ಪೋಷಕ ಗುರುಪ್ರಸಾದ್ ಕಡಂಬಾರ್ ಅತಿಥಿಯಾಗಿ ಭಾಗವಹಿಸುವರು ಎಂದು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News